ಮೈಸೂರು : ನಂಜನಗೂಡು ಬಂದ್ ಸಂಪೂರ್ಣ ಯಶಸ್ವಿಯಾಗಿದೆ.ನಂಜನಗೂಡು ನಗರದಲ್ಲಿ ಇಂದು ಶ್ರೀಕಂಠೇಶ್ವರ ಭಕ್ತ ಮಂಡಳಿಯಿಂದ ನಂಜನಗೂಡು ಸ್ವಯಂ ಪ್ರೇರಿತ ಬಂದ್ ಗೆ ಇಂದು ಗುರುವಾರ ಕರೆ ನೀಡಲಾಗಿತ್ತು.
ಬಂದ್ ನಲ್ಲಿ ಮಾಜಿ ಶಾಸಕ ಬಿ.ಹರ್ಷವರ್ಧನ್ ಭಾಗವಹಿಸಿ ಮಾತನಾಡಿದರು. ಗೃಹ ಸಚಿವರಿಗೆ ಈಗಾಗಲೇ ಮನವಿ ಪತ್ರವನ್ನು ನೀಡಲಾಗಿತ್ತು ಅವರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ.ಘಟನೆ ನಡೆದ ತಕ್ಷಣ ಶಾಂತಿ ಸಭೆಯನ್ನು ನಡೆಸಬೇಕಿತ್ತು. ಆದರೆ, ನೆನ್ನೆ ತರಾತುರಿಯಲ್ಲಿ ಶಾಂತಿ ಸಭೆಯನ್ನು ನಡೆಸಿದ್ದಾರೆ.ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಅಧಿಕಾರ ಕುಸಿದಿದೆ.ಅರ್ಚಕರಿಂದ ಸಹಿ ಹಾಕಿಸಿಕೊಂಡಿದ್ದಾರೆ. ಅವರಿಗೆ ನೀಡಿದ ಒತ್ತಡಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ಯಾರನ್ನು ರಕ್ಷಣೆ ಮಾಡಲು ಹೊರಟಿದೆ ಎಂಬುದು ತಿಳಿಯುತ್ತಿಲ್ಲ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶಾಂತಿ ಸಭೆಯನ್ನು ನಡೆಸಬೇಕು ಎಂದು ಒತ್ತಾಯ ಮಾಡಿದರು