ಮೈಸೂರು : ಮೈಸೂರಿನ ಪಾರಂಪರಿಕ ಕಟ್ಟಡ ಜಯಲಕ್ಷ್ಮಿ ವಿಲಾಸ್ ಪುನರುಜ್ಜೀವನಕ್ಕೆ ವಿದೇಶಿ ಮಿಷನ್ ಒಂದು ಮುಂದೆ ಬಂದಿದೆ.ಮಾನಸ ಗಂಗೋತ್ರಿಯಲ್ಲಿರುವ ಜಾನಪದ ವಸ್ತು ಸಂಗ್ರಹಾಲಯ ಜಯಲಕ್ಷ್ಮಿ ವಿಲಾಸ್ ನ ನವೀಕರಣಕ್ಕೆ ಯುಎಸ್ ಕೌನ್ಸಲೇಟ್ ಮತ್ತು ಶಾ ಫೌಂಡೇಷನ್ ನಿಂದ ಸಹಾಯಹಸ್ತ ದೊರಕಿದೆ.
ಡೆಕನ್ ಹೆರಿಟೇಜ್ ಫೌಂಡಾಎಷನ್ ಮತ್ತು ಮುಂಬೈ ಮೂಲಕ ಹರೀಶ್ ಶಾ ಮಾಲಿಕತ್ವದ ಶಾ ಫೌಂಡೇಷನ್ ಮತ್ತು ಮೈಸೂರು ವಿ.ವಿ ಸಹಯೋಗದೊಂದಿಗೆ ನವೀಕರಣಕ್ಕೆ ಯೋಜನೆ ರೂಪಿಸಲಾಗಿದೆ.
ಸುಮಾರು 30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪಾರಂಪರಿಕ ಕಟ್ಟಡದ ಪುನಶ್ಚೇತನಕ್ಕೆ ನಿರ್ಧಾರ ಮಾಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಜಯಲಕ್ಷ್ಮಿ ವಿಲಾಸ್ ಪಾರಂಪರಿಕ ಕಟ್ಟಡವನ್ನ ಜಾಗತೀಕ ಮಟ್ಟದಲ್ಲಿ ಒಂದು ದೊಡ್ಡ ವಸ್ತು ಸಂಗ್ರಹಾಲಯವಾಗಿ ಉಳಿಸುವ ನಿಟ್ಟಿಲ್ಲ ಸಹಕಾರ ಕೇಳಿರುವ ಮೈಸೂರು ವಿ.ವಿ.
ತ್ರಿಪಾರ್ಟಿಗಳ ಒಪ್ಪಂದಕ್ಕೆ ಇಂದು ಸಹಿ.
ಸುದ್ದಿ ಗೋಷ್ಠಿಯಲ್ಲಿ ಯುಎಸ್ ಕನ್ಸಲೇಟ್ ಜೆನರಲ್ ನ ಅಧಿಕಾರಿ ವರ್ಗ ಭಾಗಿ.ಮೊದಲ ಹಂತದಲ್ಲಿ 2.4 ಕೋಟಿ ಚೆಕ್ ವಿತರಿಸಿದ ಡಿಎಚ್ಎಫ್. ಮುಂಬೈ ಮೂಲದ ಶಾ ಫೌಂಡೇಷನ್ ನಿಂದಲೂ ಸಹಾಯ.
ಮೈಸೂರು ವಿ.ವಿ ಕುಲಪತಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ.ಇನ್ನೂ 5 ವರ್ಷಗಳಲ್ಲಿ ಜಯಲಕ್ಷ್ಮಿ ವಿಲಾಸ್ ಅರಮನೆಯ ರಿನೋವೇಷನ್ ಕಾರ್ಯ ಮುಗಿಯಲಿದೆ
ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ತಿಳಿಸಿದ ಕುಲಪತಿ ಡಾ.ಲೋಕನಾಥ್