ಮೈಸೂರು : ಮೈಸೂರು ವಿಮಾನ ನಿಲ್ದಾಣದಲ್ಲಿ ಗಂಭೀರ ಸಮಸ್ಯೆ ಎದುರಾಗಿದ್ದು ವಿಮಾನದ ಪೈಲೆಟ್ ಕಣ್ಣಿಗೆ ಕಿಡಿಗೇಡಿಗಳು ಲೇಸರ್ ಲೈಟ್ ಬಿಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣ
ಈ ಬಗ್ಗೆ ಸಾಂದರ್ಭಿಕ ಪೋಟೋ ಸಮೇತ ಮಾಹಿತಿ ನೀಡಿದ ವಿಮಾನ ನಿಲ್ದಾಣ ಪ್ರಾಧಿಕಾರ, ಈ ಘಟನೆ ಪುನರಾವರ್ತನೆಯಾಗುತ್ತಿದೆ.ವಿಮಾನ ಲ್ಯಾಂಡಿಗೆ ಆಗುವಾಗ ಟೇಕಾಫ್ ಆಗುವಾಗ ಲೇಸರ್ ಲೈಟ್ ಹಾವಳಿಯಾಗಿದೆ. ಎರಡು ಬದಿಯಿಂದಲೂ ಕಿಡಿಗೇಡಿಗಳು ಲೇಸರ್ ಲೈಟ್ ಬಿಡುತ್ತಿದ್ದಾರೆ ಎಂದು ಫೋಟೋ ಸಮೇತ ಮಾಹಿತಿ ನೀಡಿದ್ದಾರೆ