ಮೈಸೂರು : ಮುಖ್ಯಮಂತ್ರಿಗಳು ನನ್ನ ಮನೆಯವರನ್ನು ಟಾರ್ಗೆಟ್ ಮಾಡಿದ್ದಾರೆ, ಎಂಬ ಪ್ರತಾಪ್ ಸಿಂಹ ಹೇಳಿಕೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿರುಗೇಟು ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಂ ಸಿಂಹ ಶುಂಠಿ ಬೆಳೆಗಾಗಿ ಜಯಮ್ಮ ಮತ್ತು ಆನಂದ್ ಎಂಬುವವರಿಗೆ ಪಡೆದಿರುತ್ತಾರೆ.ಕರಾರು ಮಾಡಿಕೊಂಡಿದ್ದು ಒಂದು ತಿಂಗಳ ಅವಧಿಗೆ.ವಿಕ್ರಂ ಸಿಂಹ ಒಂದು ತಿಂಗಳಲ್ಲಿ ಯಾವ ಶುಂಠಿ ಬೆಳೆಯಲು ಸಾದ್ಯ..?ಎಲ್ಲಾದರು ಸಕಲೇಶಪುರದಲ್ಲಿ ಶುಂಠಿ ಬೆಳೆಯಲು ಹೇಗೆ ಸಾದ್ಯ..? 6 ಕೋಟಿಯ ಮೌಲ್ಯದ ಮರ ಕಡಿಸಿದ್ದಾರೆ.ಫಾರೆಸ್ಟ್ ಏರಿಯದಲ್ಲಿ 236 ಮರಗಳನ್ನು ಕತ್ತರಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪ ಮಾಡಿದರು
ಆ ಮರಗಳನ್ನು ಕುಡಿದು ಜಪಾನ್ ಆಸ್ಟ್ರೇಲಿಯಾ ಅಂತಹ ದೇಶಕ್ಕೆ ಎಕ್ಸ್ಪೋರ್ಟ್ ಮಾಡಿದ್ದಾರೆ. ಈ ವಿಚಾರಕ್ಕೆ ಐದು ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ.
ಈ ರೀತಿ ಬೆಳವಣಿಗೆ ಆಗಿದ್ದರೂ ಸಹ ಯಾವುದೇ ಶಿಕ್ಷೆ ಆಗಿಲ್ಲ.ವಿಕ್ರಂ ಸಿಂಹ ಹೆಸರು ಎಫ್ಐಆರ್ ನಲ್ಲಿ ಇದ್ದರೂ ಸಹ ಇಲ್ಲದಂತೆ ಮಾಡಿರುವುದು ಯಾರು.?
ನೀವಾಗಿ ನೀವೇ ಹೇಳಿದೆ ಇದ್ರೆ ನಾವು ಬಾಯಿ ಬಿಡಿಸಬೇಕಾಗುತ್ತದೆ. ವಿಕ್ರಂ ಸಿಂಹ ಕಾಡು ಕಳ್ಳ,ಪ್ರತಾಪ್ ಸಿಂಹ ನಾಡು ಕಳ್ಳ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರನ್ನು ಪ್ರತಾಪ್ ಸಿಂಹ ನೇರವಾಗಿ ಟಾರ್ಗೆಟ್ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಎಂದಾದರೂ ನನ್ನ ಮಗ ಚುನಾವಣಾ ಆಕಾಂಕ್ಷಿ ಅಥವಾ ಅವನು ಈಬಾರಿ ಚುನಾವಣೆಗೆ ನಿಲ್ತಾನೆ ಎಂದು ಹೇಳಿದ್ದಾರಾ..? ಯತೀಂದ್ರ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಿಲ್ತೀನಿ ಎಂದು ಹೇಳಿದ್ದಾರ.?
ಇಲ್ಲ ಸಲ್ಲದ ವಿಚಾರಗಳನ್ನು ಹೇಳಿಕೊಂಡು ಭಾವನಾತ್ಮಕ ಮಾತುಗಳನ್ನು ಹೇಳಿಕೊಂಡು ಜನರ ತಲೆಕೆಡಿಸುತಿದ್ದೀರಾ
ಈ ರೀತಿ ಸಿದ್ದರಾಮಯ್ಯ ಅವರ ವಿಚಾರ ಹಿಡಿದುಕೊಂಡು ಒಕ್ಕಲಿಗರ ಸಮುದಾಯ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಿದರು