ಮೈಸೂರು : ಮೈಸೂರಿಗೆ ವಿಕಸಿತ ಭಾರತ ಯೋಜನೆಯಡಿ ರಥಯಾತ್ರೆ ಬಂದಿದೆ.ಈ ರಥಯಾತ್ರೆ ಮೈಸೂರಿನ 65 ವಾರ್ಡ್ ಗಳಲ್ಲೂ ಸಂಚಾರ ಮಾಡಲಿದೆ.
ಮೋದಿ ಜೀ ಪ್ರಧಾನಿ ಆದ ಬಳಿಕ ವಿಕಸಿತ ಯೋಜನೆಯಡಿ ಹತ್ತು ಹಲವು ಯೋಜನೆಗಳನ್ನ ಜನ ಸಾಮಾನ್ಯರಿಗೆ, ಫಲಾನುಭವುಗಳಿಗೆ ಸವಲತ್ತುಗಳು ಒದಗಿಸಲಾಗುತ್ತಿದೆ ಎಂದರು.
ಜಲಜೀವನ ಮಿಷನ್,ಉಜ್ವಲ ಯೋಜನೆ,ಪಿಎಂ ಕಿಸಾನ್ ಯೋಜನೆ, ಯುಪಿಎ ಭೀಮ್ ಆಪ್,ವಂದೇ ಭಾರತ್ ರೈಲು ಸಂಚಾರ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಕೊಡುತ್ತಿದ್ದಾರೆ.ಉಜ್ವಲ ಯೋಜನೆ ಎರಡನೇ ಹಂತದ ಯೋಜನೆ ಆರಂಭವಾಗಿದೆ.
ಮನೆ ಭಾಗಿಲಿಗೆ ಹೋಗಿ ಗ್ಯಾಸ್ ಕೊಡುವ ಕೆಲಸ ಮಾಡುತ್ತಿದೆ.ನಮ್ಮ ರಥ ಮನೆ ಬಾಗಿಲಿಗೆ ಹೋಗುತ್ತದೆ.
ಜನರಿಗೆ ಸವಲತ್ತುಗಳನ್ನ ಸ್ಥಳದಲ್ಲೇ ಕೊಡುವಂತಹ ಕೆಲಸವನ್ನ ಸ್ಥಳದಲ್ಲೇ ಮಾಡುವ ಕೆಲಸಕ್ಕೆ ಕೇಂದ್ರ ಸರ್ಕಾರದ ಮುಂದಾಗಿದೆ.ಮೈಸೂರಿನಲ್ಲಿ 300 ಕಡೆ ವಿವಿಧ ಭಾಗಗಳಲ್ಲಿ ರಥ ಸಂಚಾರ ಮಾಡಲಿದೆ.ಈ ಯಾತ್ರೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ.56 ಸಾವಿರ ಜನರಿಗೆ ಆಯುಷ್ಮಾನ್ ಕಾರ್ಡ್ ವಿತರಿಸಿದ್ದೇವೆ.
ಪಿ.ಎಂ ಕಿಸಾನ್ 2,45,268 ಜನ ರೈತರು ನೋಂದಣಿ ಮಾಡಿಕೊಂಡಿದ್ದಾರೆ.ಹಿಂದೆ ರಾಜ್ಯ ಸರ್ಕಾರ ಕೂಡ ಕೊಡುತ್ತಿತ್ತು ಈಗಿನ ಸರ್ಕಾರ ಅದನ್ನು ನಿಲ್ಲಿಸಿದೆ.
ಇನ್ನೂ ಜ.24 ರವರೆಗೂ ಯಾತ್ರೆ ನಡೆಯುತ್ತದೆ ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು
ಸಂಸದ ಪ್ರತಾಪ್ ಸಿಂಹ ತಿಳಿಸಿದರು