ಮೈಸೂರು : ದಶಪಥ ಹೆದ್ದಾರಿ ನಿರ್ಮಾಣಕ್ಕೆ ಯೋಜನೆಗೆ 8500 ಕೋಟಿ ಖರ್ಚಾಗಿದೆ.ಅದರಲ್ಲಿ ಸಿದ್ದರಾಮಯ್ಯ ಮತ್ತು ಮಹಾದೇವಪ್ಪ ಎಂಟುವರೆ ರೂಪಾಯಿಯನ್ನೂ ಕೊಟ್ಟಿಲ್ಲ. ಇಷ್ಟು ಕೊಟ್ಟಿದ್ದೀನಿ ಅಂತ ಹೇಳಿದರೆ ದಶಪಥ ರಸ್ತೆಗೆ ಅವರ ಹೆಸರನ್ನೇ ಇಡೋಣ ಬೇಕಾದರೆ ಸಿದ್ದರಾಮಯ್ಯ ಮಹದೇವಪ್ಪ ಜೋಡಿ ರಸ್ತೆ ಎಂದು ನಾಮಕರಣ ಮಾಡೋಣ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು
ಅಂತರ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಒಂದಷ್ಟು ಸಮಸ್ಯೆಗಳು ಎದರುರಾದವು.
ಈಗ ಉಯಿಲಾಳು ಬಳಿ 26 ಎಕರೆ ಜಾಗ ಸಿಕ್ಕಿದೆ.
ಅದರು ರೆವಿನ್ಯೂ ಸೆಕ್ರೇಟರಿ ಬಳಿ ಕಳಿಸಿಕೊಟ್ಟಿದ್ದೀವಿ.
ಅದನ್ನು ಕೆಸಿಎ ಗೆ ಕಳಿಸಿಕೊಡಲಾಗುತ್ತದೆ.
ಉಯಿಲಾಳು ಬಳಿ ಔಟರ್ ಪೆರಿಫರಲ್ ರಿಂಗ್ ರೋಡ್ ಬರಲು ವ್ಯವಸ್ಥೆ ಮಾಡಲಾಗುತ್ತದೆ.ರೈತ ಸಂಘ ಆಕ್ಷೇಪದ ಬಗ್ಗೆ ನಾನು ಏನು ಹೇಳಲ್ಲ.ಬೇಡ ಅಂತ ಹೇಳೋರು ಇರುತ್ತಾರೆ ಹಾಗಂತ ಅಭಿವೃದ್ಧಿ ಕೆಲಸ ನಿಲ್ಲಸಲಾಗಲ್ಲ.
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ ಅಂತ ಈಗಾಗಲೇ ತೀರ್ಮಾನವಾಗಿದೆ.ಬೇಕಾದರೆ ನಂದಿ ವಿಗ್ರಹದ ವರಗೆ ರೋಪ್ ವೇ ಮಾಡಲಿ ಅದಕ್ಕೆ ಯಾರ ತಕರಾರು ಇಲ್ಲ.
ನಾನು ಯಾರೇ ಏನೇ ಅಂದರೂ ತಲೆ ಕೆಡಿಸಿಕೊಳ್ಳಲ್ಲ.
ಅಭಿವೃದ್ಧಿ ಕೆಲಸವೊಂದೇ ನನ್ನ ಮಂತ್ರ. ಕ್ರಿಕೆಟ್ ಸ್ಟೇಡಿಯಂ ಮಾಡಿದರೆ ಮೈಸೂರು ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು
ಸೆಮಿಕಂಡಕ್ಟರ್ ಪಾರ್ಕ್ ಗೆ ಕೋಚನಹಳ್ಳಿಯಲ್ಲಿ ಜಾಗ ಗುರ್ತಿಸಿದ್ದೇವು.ಈಗಿನ ಸರ್ಕಾರ ಇದಕ್ಕೆ ಸಹಕಾರ ಕೊಡುತ್ತಿಲ್ಲ.ಮೈಸೂರು ಅಭಿವೃದ್ಧಿ ಬಗ್ಗೆ ಪ್ರೀತಿ ಇರುವವರು ಅಡ್ಡಿ ಮಾಡೋದು ಬೇಡ.ಬಿಜೆಪಿ ಸರ್ಕಾರ ಬಂದರೆ ಮತ್ತೆ ಮಾಡುತ್ತೇವೆ. ರಾಜ್ಯ ಸರ್ಕಾರ ನಮ್ಮ ಅಭಿವೃದ್ಧಿ ಯೋಜನೆಗಳಿಗೆ ಸಹಕಾರ ನೀಡಬೇಕಲ್ಲ ಎಂದು ಹೇಳಿದರು