ಮೈಸೂರು : ಪ್ರತಾಪ್ ಸಿಂಹ ಹೇಳಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಂಸದ ಪ್ರತಾಪ್ ಸಿಂಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಹುಣಸೂರಿನಲ್ಲಿ ಹನುಮ ಜಯಂತಿಯ ಕಾರ್ಯಕ್ರಮದಲ್ಲಿ ಪ್ರತಾಪ ಸಿಂಹ ಸಿದ್ದರಾಮಯ್ಯರನ್ನು ಸೋಂಬೇರಿ ಸಿದ್ದ ಎಂದು ಕರೆದಿದ್ದರು. ಇದಕ್ಕೆ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಇಂದು ಸಂಜೆ ಮೈಸೂರು ಗ್ರಾಮಾಂತರ ಅಧ್ಯಕ್ಷ ಬಿ.ಜೆ ವಿಜಯಕುಮಾರ್ ,ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹಾಗೂ ಇತರ ಮುಖಂಡರ ನೇತೃತ್ವದಲ್ಲಿ ಕಛೇರಿಯ ಮುಂಭಾಗ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸಿದ್ದರಾಮಯ್ಯ ರವರ ವಯಸ್ಸೆಷ್ಟು ಪ್ರತಾಪ್ ಸಿಂಹ ವಯಸ್ಸೆಷ್ಟು ಅವರು ರಾಜಕೀಯಕ್ಕೆ ಬಂದಾಗ ಇವ್ರು ಎಲ್ಲಿದ್ದರೂ.ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರನ್ನ ಸೋಮಾರಿ ಸಿದ್ದ ಎಂದು ಹೇಳಿದ್ದಾರೆ.
ಸುಖ ಸುಮ್ಮನೆ ಸಿಎಂ ವಿಚಾರ ಮಾತಾನಾಡುತ್ತಿದ್ದಾರೆ.
ಪ್ರತಾಪ್ ಸಿಂಹ ಗಲಭೆ ಎದ್ದೇಳಿದುವ ಪ್ರಯತ್ನ ಮಾಡುತ್ತಿದ್ದಾರೆ.ಪ್ರತಾಪ್ ಸಿಂಹ ಯಾವ ಚಳುವಳಿ ಮಾಡಿಕೊಂಡು ಬಂದಿದ್ದಾರೆ. ಮೋದಿ ಬಗ್ಗೆ ಪುಸ್ತಕ ಬರೆದು ಟಿಕೆಟ್ ಕಿಟ್ಟಿಸಿಕೊಂಡರು. ಗೌರವಾನ್ವಿತ ವ್ಯಕ್ತಿಯನ್ನೂ ಸೋಮಾರಿ ಸಿದ್ದ ಎಂದು ಹೇಳಿದ್ದಾರೆ ಇದು ಖಂಡನೀಯ.
149 ,506 ,153,ಸೆಕ್ಷನ್ ನಲ್ಲಿ ಡಿಸಿಪಿ ಮತ್ತು ಎಸಿಪಿ ಕೇಸ್ ದಾಖಲಿಸಿಕೊಳ್ಳಲಿ ಎಂದು ಆಕ್ರೋಶ ಹೊರ ಹಾಕಿದರು.
ಕೋಮುಗಲಭೆ ಮಾಡುತ್ತಿರುವ ಪ್ರತಾಪ್ ಸಿಂಹ ವಿರುದ್ಧ ಧಿಕ್ಕಾರ ಘೋಷಣೆ.ದುರಂಕರಿ ಪ್ರತಾಪ್ ಸಿಂಹ ದೇಶ ದ್ರೋಹಿ, ಪ್ರತಾಪ್ ಸಿಂಹ ಬಂಧಿಸಬೇಕು ಎಂದು
ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು
ರಸ್ತೆ ತಡೆದು ಪ್ರತಿಭಟನೆಗೆ ಮುಂದಾದ ಪ್ರತಿಭಟನಾ ಕಾರರು.
ಈ ನಡುವೆ ಕಾಂಗ್ರೆಸ್ ಕಾರ್ಯಕರ್ತ ಕಾರಿನಿಂದ ಬಂದು ಏಕಾಏಕಿ ಟಯರ್ ಗೆ ಬೆಂಕಿ ಹಾಕಿದ್ದಾರೆ
ಬೆಂಕಿ ಹಚ್ಚಿದ ವ್ಯಕ್ತಿಯನ್ನು ತಕ್ಷಣ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಆತ ಬಂದ ಕಾರನ್ನು ಪೊಲೀಸರು ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ
