ಮೈಸೂರು : ವಿವಾಹಿತ ಮಹಿಳೆಯೊಂದಿಗೆ ಯುವಕನ ಸಲುಗೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಗೃಹಿಣಿ ಯುವಕನ ಪೋಟೋ ವೈರಲ್, ಪೋಟೋ ನೋಡಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದು
ಗೃಹಿಣಿ ಆತ್ಮಹತ್ಯೆ ಬೆನ್ನಲ್ಲೇ ಯುವಕ ಸಹಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಶೃತಿ 28 ಮುರುಳಿ 20 ಆತ್ಮಹತ್ಯೆ ಮಾಡಿಕೊಂಡಿರುವವರು.
ಇಬ್ಬರು ಹುಣಸೂರು ಕಲ್ಕುಣಿಗೆ ನಿವಾಸಿಗಳು
ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಇಬ್ಬರು ಒಟ್ಟಿಗೆ ಇದ್ದ ಪೋಟೋ ಸ್ಟೇಟಸ್ನಲ್ಲಿ ಅಪ್ಲೋಡ್ ಮಾಡಿದ್ದ ಮುರುಳಿ.ನಂತರ ಆ ಪೋಟೋ ವೈರಲ್ ಆಗಿತ್ತು
ಇದರಿಂದ ಎರಡು ಕುಟುಂಬದ ನಡುವೆ ಘರ್ಷಣೆ
ಇದರಿಂದ ಹೆದರಿದ ಶೃತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು.ವಿಚಾರ ತಿಳಿದು ಮುರುಳಿ ಸಹಾ ನೇಣಿಗೆ ಶರಣು. ಎಲೆಕ್ಟ್ರಿಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮುರುಳಿ
ಈ ಸಂಬಂಧ ಪರಸ್ಪರ ದೂರು ನೀಡಿದ ಶೃತಿ ಹಾಗೂ ಮುರುಳಿ ಕುಟುಂಬದವರು
ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.