ಮೈಸೂರು : ಸಿಮೆಂಟ್ ಇಟ್ಟಿಗೆಯಿಂದ ವ್ಯಕ್ತಿಯ ತಲೆ ಜಜ್ಜಿ ಭೀಕರ ಕೊಲೆ ಮಾಡಿರುವ ಘಟನೆ ಹುಣಸೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾಗಿರುವ ವ್ಯಕ್ತಿ ವಯಸ್ಸು ಸುಮಾರು 30 ವರ್ಷ ಎಂದು ತಿಳಿದು ಬಂದಿದೆ.
ಹುಣಸೂರಿನ ಅರಸು ಪ್ರತಿಮೆ ವೃತ್ತದ ಬಳಿ ಕೊಲೆಯಾಗಿದ್ದು, ಇಟ್ಟಿಗೆ ತಯಾರಿಸುವ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಡಿವೈಎಸ್ಪಿ ಗೋಪಾಲಕೃಷ್ಣ,ಹುಣಸೂರು ಟೌನ್ ಇನ್ಸ್ಪೆಕ್ಟರ್ ದೇವೇಂದ್ರ ಹಾಗೂ ಸಿಬ್ಬಂದಿಗಳು ಭೇಟಿ ಸ್ಥಳ ಪರಿಶೀಲಿಸಿದ್ದಾರೆ ಅಲ್ಲದೆ ಕೊಲೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಪೊಲೀಸರು ಕಲೆ ಹಾಕುತ್ತಿದ್ದು ಸಮೀಪದಲ್ಲಿರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿ
ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ