ಮೈಸೂರು : ನನ್ನ ಮೇಲೆ ಬಡಗಲಪುರ ನಾಗೇಂದ್ರ ಅವರು ಮಾಡಿರುವ ಆರೋಪ ಸುಳ್ಳು. ಬಡಗಲಪುರ ನಾಗೇಂದ್ರ ಅವರು ಒಬ್ಬ ಹಿರಿಯ ಹೋರಾಟಗಾರು.ನನ್ನ ಹತ್ತಿಕ್ಕುವ ನಿಟ್ಟಿನಲ್ಲಿ ಹಲವಾರು ಹುನ್ನಾರ ಮಾಡಿ ನನ್ನ ಮೇಲೆ ರೌಡಿ ಸೀಟರ್ ಓಪನ್ ಮಾಡಿಸಿದ್ದಾರೆ ಎಂದು ಇಂಗಲಕುಪ್ಪೆ ಕೃಷ್ಣೇಗೌಡ ಹೇಳಿದರು.
ಪೋಲಿಸರಿಗೆ ಆಮಿಷ ಒಡ್ಡಿ ನನ್ನ ಮೇಲೆ ರೌಡಿ ಶೀಟರ್ ಓಪನ್ ಮಾಡಿಸಿದ್ದಾರೆ.ಅಧಿಕಾರಿಗಳನ್ನು ಪೋಲಿಸರನ್ನ ದಿಕ್ಕುತಪ್ಪಿಸುವ ಕೆಲಸವನ್ನು ಬಡಗಲಪುರ ನಾಗೇಂದ್ರ ಮಾಡಿದ್ದಾರೆ.ರೈತರ ಹೆಸರಿನಲ್ಲಿ ಹಲವಾರು ಅಕ್ರಮಗಳನ್ನು ಮಾಡಿದ್ದಾರೆ.ರೈತರಿಗೆ ನಿಮ್ಮ ಕೊಡುಗೆ ಏನು.
ಪುಟ್ಟಣ್ಣಯ್ಯ ಅವರು ಕಟ್ಟಿರುವ ಸಂಘಟನೆಯಲ್ಲಿ ನೀನು ಈಗ ಮೇರಿಯುತ್ತಿದ್ದೀಯ.?ನೀನು ಮಾಡಿರುವ ಅಕ್ರಮಗಳಿಗೆ ನನ್ನ ಬಳಿ ಸಾಕಷ್ಟು ಸಾಕ್ಷಿಗಳಿವೆ.
ನನ್ನನ್ನ 420 ಅಂತೀಯಾ ನೀನು ಡಬಲ್ 420, ನೀನು ಗಂಡಸ್ತನ ಇದ್ರೆ ನೀನು ಪ್ರತ್ಯೇಕವಾಗಿ ಸಂಘ ಕಟ್ಟಿ ನೋಡು ಎಂದು ಕಿಡಿಕಾರಿದರು
ದಟ್ಟಗಳ್ಳಿಯಲ್ಲಿ ದೊಡ್ಡ ಬಂಗಲೆ ಕಟ್ಟಿರೋದು ಗೊತ್ತು.
ನೀನು ಎಲ್ಲೇಲ್ಲಿ ಎಷ್ಟೆಷ್ಟು ಆಸ್ತಿ ಮಾಡಿದ್ದೀಯಾ ಅನ್ನೋದು ಗೊತ್ತು.ಇಡೀ ರಾಜ್ಯವನ್ನೇ ಲೂಟಿ ಮಾಡಿದ್ದೀರಲ್ಲ ರೈತ ಹೆಸರಿನಲ್ಲಿ.ಬಡಗಲಪುರ ನಾಗೇಂದ್ರ ಒಬ್ಬ ಕಾಂಗ್ರೆಸ್ ಬ್ರೋಕರ್ ಇವನು ನನ್ನ ಬಗ್ಗೆ ಮಾತಾನಾಡುವ ನೈತಿಕತೆ ಇಲ್ಲ.ಏಕವಚನದಲ್ಲೇ ಬಡಗಲಪುರ ನಾಗೇಂದ್ರ ವಿರುದ್ಧ ಹರಿಹಾಯ್ದರು