ಮೈಸೂರು : ಭವಾನಿ ರೇವಣ್ಣ ಕಾರಿಗೆ ಬೈಕ್ ಡಿಕ್ಕಿ.
ಡಿಕ್ಕಿ ಹೊಡೆದ ಬೈಕ್ ಚಾಲಕನನ್ನೇ ಭವಾನಿ ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆಅಕ್ಕಾ ಸೈಡಿಗೆ ಕಾರ್ ಹಾಕಿ ಅಂದದ್ದಕ್ಕೆ ಸ್ಥಳೀಯರ ವಿರುದ್ಧ ಕಿಡಿ ಕಾರಿದ್ದಾರೆ.
ರಿಪೇರಿ ಮಾಡಿಸೋಕೆ ಐವತ್ತು ಲಕ್ಷ ರೂ ಹಣ ಬೇಕು.
ಯಾರಾದರೂ ನ್ಯಾಯ ಮಾತಾಡೋರು ಐವತ್ ಲಕ್ಷ ಹಣ ಕೊಟ್ಟು ಮಾತಾಡಿ.ಒಂದೂವರೆ ಕೋಟಿ ರೂಪಾಯಿ ಗಾಡಿ ಇದು.ಸಾಲಿಗ್ರಾಮ ಠಾಣೆಯ ಇನ್ಸ್ ಪೆಕ್ಟರ್ ಕರೀರಿ.
ತಗೊಂಡ್ ಹೋಗಿ ಇವನನ್ನ ಒಳಗೆ ಹಾಕ್ಲಿ.
ಸಾಯಂಗಿದ್ರೆ ನೀನ್ ಸಾಯಬೇಕಿತ್ತು.
ಬಸ್ಸಿಗೆ ಗಿಸ್ಸಿಗೆ ಸಿಕ್ಕಾಂಡೊಂಡ್ ಸಾಯಬೇಕಿತ್ತು.
ಸಾಯೋಕೆ ನನ್ ಕಾರೇ ಬೇಕಿತ್ತಾ? ಅವನು ಸತ್ತೋಗ್ತಾನೆ ಅಂತ ಅವನ ಬಗ್ಗೆ ಯಾಕ್ ಯೋಚ್ನೆ ಮಾಡ್ತೀಯಾ?
ಒಂದೂವರೆ ಕೋಟಿ ರೂಪಾಯಿ ಕಾರ್ ಬಗ್ಗೆ ಯೋಚ್ನೆ ಮಾಡು ಎಂದು ಮಾನವಿಯತೆ ಮರೆತು ಕಾರು ದುಡ್ಡಿನ ಬಗ್ಗೆ ಮಾತನಾಡಿದ್ದಾರೆ.ಅಲ್ಲದೆ ಬೈಕ್ ಸವಾರನನ್ನ ನಿಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಂಡ ಭವಾನಿ ರೇವಣ್ಣ.
KA54 – K0163 ಹೀರೋಹೊಂಡಾ ಫ್ಯಾಷನ್ ಬೈಕ್ ಹಾಗೂ ಭವಾನಿ ರೇವಣ್ಣರ KA-03 NK – 5 ಐಷಾರಾಮಿ ಕಾರು ನಡುವೆ ಅಪಘಾತವಾಗಿದೆ.