ಮೈಸೂರು : ಬಂಡೀಪುರ ರಾಷ್ಟೀಯ ಉದ್ಯಾನವನ ಹೆಡಿಯಾಲ ಅರಣ್ಯವ್ಯಾಪ್ತಿಯ ಕಲ್ಲಹರ ಕಟ್ಟೆಯಲ್ಲಿ ರೈಲ್ವೇ ಕಂಬಿ ತೆರದಿರುವುದರಿಂದ ಮೂರು ದಿನಗಳಿಂದ ಪ್ರತಿದಿನ ಕಾಡಾನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಲಕ್ಷಾಂತರ ರೂ ಬೆಲೆ ಬಾಳುವ ಬಾಳೆ ಬೆಳೆಗಳನ್ನು ನಾಶ ಮಾಡುತ್ತಿವೆ ಕಾವಲು ಕಾಯ್ದರು ಪ್ರಯೋಜನವಿಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ನಂಜನಗೂಡು ತಾಲ್ಲೂಕಿನ ಈರೇಗೌಡನಹುಂಡಿ ಗ್ರಾಮದ ರಾಜೇಶ್ ಹಾಗೂ ರಾಜು ಎಂಬುವರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು ಬಾಳೆ ಬೆಳೆಗಳನ್ನು ನಾಶ ಮಾಡಿ ಪೈಪ್ ಲೈನ್ ಅಳವಡಿಸಿರುವುದನ್ನು ನಾಶ ಮಾಡಿವೆ ಪ್ರತಿದಿನ ಇದೇ ರೀತಿ ರೈತರು ಬೆಳೆದ ಬೆಳೆಯನ್ನು ನಾಶ ಮಾಡಿದರೆ ಸಾಲ ಕೊಟ್ಟವರಿಗೆ ಹೇಗೆ ಸಾಲ ವಾಪಾಸ್ ಕೊಡುವುದು ನಾವು ಜೀವನವನ್ನು ಹೇಗೆ ಮಾಡಬೇಕು ಎನ್ನುವುದೇ ಪ್ರಶ್ನೆಯಗಿದೆ ಅರಣ್ಯ ಇಲಾಖೆಯವರು ಶೀಘ್ರದಲ್ಲೇ ತೆರೆದಿರುವ ರೈಲ್ವೆ ಕಂಬಿಯನ್ನು ಅಳವಡಿಸಿ ಕಾಡಾನೆಗಳು ಹೊರಬರದಂತೆ ಎಚ್ಚರ ವಹಿಸಬೇಕು ಅಲ್ಲದೆ ಶಾಸಕರು ಇತ್ತ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ