ಚಾಮರಾಜನಗರ : ಅರಿಶಿಣ ಫಸಲಿನ ಮದ್ಯೆ
ಗಾಂಜಾ ಬೆಳೆದಿದ್ದ ಇಬ್ಬರ ಬಂಧನ,ಬರೋಬ್ಬರಿ 34 ಕೆಜಿಯಷ್ಟು ಹಸಿ ಗಾಂಜಾವನ್ನು ಹನೂರು ಪೋಲಿಸರು ವಶಕ್ಕೆ ಪಡೆದಿರುವ ಘಟನೆ ಆನೆಗುಂದಿ ಗ್ರಾಮದಲ್ಲಿ ನೆಡೆದಿದೆ
ತಾಲ್ಲೂಕಿನ ಪಿಜಿಪಾಳ್ಯ ಸಮೀಪದ ಆನೆಗುಂದಿ ಗ್ರಾಮದ ಎಸ್.ಬಾಲು(65) ಹಾಗೂ ಇವರ ಪುತ್ರ ಮಹಾಲಿಂಗ(35) ಬಂಧಿತ ಆರೋಪಿಗಳಾಗಿದ್ದಾರೆ.ಪಿಜಿ ಪಾಳ್ಯ ವ್ಯಾಪ್ತಿಯ ಸರ್ವೆ ನಂಬರ್202ರ ಜಮೀನೊಂದರಲ್ಲಿ ಬೆಳಯಲಾಗಿದ್ದ ಅರಿಶಿಣದ ಫಸಲಿನ ಮದ್ಯೆ ಅಕ್ರಮವಾಗಿ ಗಾಂಜಾ ಬೆಳೆದ ಖಚಿತ ಮಾಹಿತಿ ಮೇರೆಗೆಡಿ ವೈಎಸ್ ಪಿ ಸೋಮೇಗೌಡ ಹನೂರು ಇನ್ಸ್ಪೆಕ್ಟರ್ ಶಶಿಕುಮಾರ್ ಮಾರ್ಗದರ್ಶನದಲ್ಲಿ ಧಾಳಿನೆಡೆಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಬೆಳೆದಿದ್ದನ್ನು ಪತ್ತೆ ಹಚ್ಚಿ ಬಂಧಿತರಿಂದ ಬರೋಬ್ಬರಿ 34 ಕೆಜಿಯಷ್ಟು ಹಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ದಾಳಿಯಲ್ಲಿ ಪಿಎಸ್ಐ ಮಂಜುನಾಥ್ ಪ್ರಸಾದ್ ಎಎಸ್ಐ ತರ್ಕಿ ಉಲ್ಲಾ ಸಿಬ್ಬಂದಿಗಳಾದ
ಬಿಳಿ ಗೌಡ ಕಿಶೋರ್ ಶಿವಕುಮಾರ್ ವೆಂಕಟೇಶ್ ರಾಘವೇಂದ್ರ ರಾಜು ಚಂದ್ರ ಇನ್ನಿತರರು ಇದ್ದರು