ಮೈಸೂರು : ಜಿಲ್ಲಾ ಬಿಜೆಪಿ ಕಚೇರಿಯಲ್ಲಿ
ಸಂತ ಶ್ರೇಷ್ಠ ಶ್ರೀ ಕನಕದಾಸರ 536 ನೇ ಜಯಂತಿ ಯನ್ನೂ ಜಿಲ್ಲಾ ಮತ್ತು ನಗರ ಘಟಕದ ವತಿಯಿಂದ ಆಚರಣೆ ಮಾಡಲಾಯಿತು. ಕನಕಸಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕೆ.ಆರ್ ಶಾಸಕ ಶ್ರೀವತ್ಸ, ಮಾಜಿ ಸಚಿವ ಎನ್ ಮಹೇಶ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಕನಕದಾಸ ಭಾವಚಿತ್ರಕ್ಕೆ ನೆರೆದಿದ್ದ ಎಲ್ಲರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಮಂಗಳಾ ಸೋಮಶೇಖರ್,ಜೋಗಿ ಮಂಜು ಸೇರಿದಂತೆ ನೂರಾರು ಜನ ಭಾಗಿಯಾಗಿದ್ದು
ಕನಕದಾಸರ ಕುರಿತು ಮಾಜಿ ಸಚಿವ ಎನ್ ಮಹೇಶ್ ಭಾಷಣ ಮಾಡಿದರು.