ಮೈಸೂರು : ನನ್ನ ವಿರುದ್ಧ ಚುನಾವಣೆಯಲ್ಲಿ ಕಾಂಗ್ರೆಸ್ ನ ಯಾವುದೇ ಅಭ್ಯರ್ಥಿ ನಿಂತರು 2 ಲಕ್ಷ ಮತಗಳ ಅಂತದಿಂದ ಗೆಲ್ಲುತ್ತೇನೆ. ನಾನು ಒಂತರ ಎಲ್ಲಾ ಪಕ್ಷಗಳ ಮತದಾರರ ಅಭ್ಯರ್ಥಿ ಇದ್ದಂತೆ.ಎಲ್ಲಾ ಪಕ್ಷದಲ್ಲು ಮೋದಿ ಅಭಿಮಾನಿಗಳಿದ್ದಾರೆ.ಅವರೆಲ್ಲ ನನಗೆ ಮತ ಹಾಕುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.
ಈಗ ಜೆ.ಡಿ.ಎಸ್ ಕೂಡ ನಮ್ಮ ಜೊತೆ ಮೈತ್ರಿ ಮಾಡಿಕೊಂಡಿರೋದ್ರಿಂದ ನಮಗೆ ಹೆಚ್ಚಿನ ಬಲ ಬಂದಿದೆ.
ಕಾಂಗ್ರೆಸ್ನಿಂದ ಯಾರೇ ಅಭ್ಯರ್ಥಿ ಬಂದರು ನನ್ನ ಗೆಲುವು ನಿಶ್ಚಿತ ಎಂದರು.
ಪ್ರತಾಪ್ ಸಿಂಹ ಹೆಸರಿನಲ್ಲಿ ಇಂಗ್ಲೀಷ್ ನ ಅಕ್ಷರಗಳ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,
ಅದು ಸಂಖ್ಯ ಶಾಸ್ತ್ರ ಅಂತೇನು ಅಲ್ಲ.ನೀವು ಸಂಖ್ಯೆ ಶಾಸ್ತ್ರ ಅಂದರೆ ಅದು ಸಂಖ್ಯೆ ಶಾಸ್ತ್ರ ಅಷ್ಟೆ.ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಹೆಸರು ಬರೆಯುವಾಗ ಅದು ಸಮಸ್ಯೆಯಾಗುತಿತ್ತು.ಹೀಗಾಗಿ ಕನ್ನಡದಲ್ಲಿ ಹೆಸರು ಇರುವಂತೆ ಎತಾವತ್ತಾಗಿ ಇಂಗ್ಲೀಷ್ ನಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ ಅಷ್ಟೆ.ಈ ಬದಲಾವಣೆಗು ಚುನಾವಣೆಗು ಸಂಬಂಧ ಇಲ್ಲ.ಅದೇ ಹೆಸರಿನಿಂದಲೆ ನಾನು ಎರಡು ಬಾರಿ ಗೆದ್ದಿದ್ದೇನೆ.ಮೈಸೂರೆ ಗೊತ್ತಿಲ್ಲದ ನನಗೆ ಮೊದಲ ಬಾರಿ ಮೈಸೂರಿನ ಜನ ನನ್ನನ್ನು ಗೆಲ್ಲಿಸಿದ್ದಾರೆ.
ಹೀಗಾಗಿ ಚುನಾವಣೆಗು ಇದಕ್ಕು ಸಂಬಂಧ ಇಲ್ಲ ಎಂದರು