ಮೈಸೂರು : ಮೈಸೂರಿನಲ್ಲಿ ಭ್ರೂಣ ಹತ್ಯೆ ಪ್ರಕರಣ ಮೈಸೂರು ಮಹಾನಗರ ಪಾಲಿಕೆಯಿಂದ ಆಸ್ಪತ್ರೆಗೆ ಟ್ರೇಡ್ ಲೈಸೆನ್ಸ್ ಆಗಿಲ್ಲ. ಮಹಾನಗರಪಾಲಿಕೆಯ ವಲಯ ಕಚೇರಿ ಅಧಿಕಾರಿಯಿಂದ ಲೋಪ ಆಗಿರಬಹುದು.
ಈ ಬಗ್ಗೆ ತನಿಖೆ ಮಾಡುತ್ತೇವೆ.ಲೋಪವಾಗಿದ್ದರೆ ವಲಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ಹೇಳಿದರು.
ಹಲವು ಆಸ್ಪತ್ರೆಗಳಿಗೆ ಟ್ರೇಡ್ ಲೈಸೆನ್ಸ್ ಇರುವುದಿಲ್ಲ.
ಅವುಗಳನ್ನು ಪರಿಶೀಲನೆ ಮಾಡುತ್ತೇವೆ.
ಆಸ್ಪತ್ರೆ ಅಥವಾ ಕ್ಲಿನಿಕ್ ನಡೆಸಲು ಕೆ ಪಿ ಎಂ ಇ ಕಾಯ್ದೆಯಡಿ ಅನುಮತಿ ಪಡೆಯಬೇಕು.ಅದೆಲ್ಲವನ್ನು ಪರಿಶೀಲನೆ ಮಾಡಬೇಕಿರುವುದು ಡಿ ಎಚ್ ಓ ಕಾರ್ಯವ್ಯಾಪ್ತಿಗೆ ಸೇರಿದ್ದು.ಇದೀಗ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.ಅದರಂತೆ ತಂಡ ರಚನೆ ಮಾಡಿ ಎಲ್ಲಾ ಕಡೆಯೂ ಪರಿಶೀಲನೆ ಮಾಡುತ್ತೇವೆ ಎಂದರು.