ಚಾಮರಾಜಗರ : ಕರ್ನಾಟಕ ಮಾರ್ಗವಾಗಿ ತಮಿಳುನಾಡಿನ ಅಂದಿಯೂರಿಗೆ 25 ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿದ್ದವರನ್ನು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಮೈಸೂರು ಎನ್.ಆರ್. ಮೊಹಲ್ಲಾದ ಫಾರೂಕ್ ಪಾಷ (35) ಚಾಲಕ ಬಂಧಿತ ಆರೋಪಿ. ಈತ ಈಚರ್ ವಾಹನದಲ್ಲಿ 25 ಜಾನುವಾರುಗಳನ್ನು ತುಂಬಿಕೊಂಡು ತಮಿಳುನಾಡಿನ ಅಂದಿಯೂರಿಗೆ ತೆರಳಲು ರಾಮಾಪುರ ನಾಲ್ ರೋಡ್ ಮಧ್ಯಾಹ್ನದಲ್ಲಿ ವಾಹನವು ರಸ್ತೆ ಬದಿಗೆ ಮಗುಚಿ ಬಿದ್ದಿದ್ದು, ವಿಷಯ ತಿಳಿದ ರಾಮಾಪುರ ಠಾಣೆಯ ಎಸೈ ರಾಧ ಸಿಬ್ಬಂದಿಗಳಾದ ಸುಲ್ತಾನ್, ಜಗದೀಶ್, ಮಹೇಂದ್ರ ಇವರುಗಳು ಮಾಹಿತಿ ಕಲೆ ಹಾಕಿದಾಗ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳನ್ನು ಖರೀದಿ ಮಾಡಿ ತಮಿಳುನಾಡಿನ ಅಂದಿಯೂರಿಗೆ ಆಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ವಿಷಯ ಪಡೆದುಕೊಂಡು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಫಾರೂಕ್ ಪಾಷನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಜಾನುವಾರುಗಳನ್ನು ರಕ್ಷಿಸಿ ಮೈಸೂರಿನ ಪಿಂಜರ ಪೋಲ್ ಗೆ ಕಳುಹಿಸಿದ್ದಾರೆ.