ಬೆಂಗಳೂರು : 2024ರ ಲೋಕಸಭಾ ಚುನಾವಣೆ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈಗಾಗಲೇ ರಣತಂತ್ರ ಎಣೆಯುತ್ತಿವೆ. ಬಿಡದಿ ತೋಟದ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ.
ಬಿಡದಿ ಮನೆಯಲ್ಲಿ ಕುಮಾರಸ್ವಾಮಿ-ವಿಜಯೇಂದ್ರ ದೋಸ್ತಿ ಮಾತುಕತೆ ನಡೆಸಿದ್ದಾರೆ, ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಪ್ಲ್ಯಾನ್ ಸಿದ್ಧವಾಗಿದೆ. ಅಲ್ಲದೇ ದೋಸ್ತಿ ಕ್ಷೇತ್ರಗಳ ಸೀಟು ಹಂಚಿಕೆಗಳ ಬಗ್ಗೆಯೂ ಪ್ರಾಥಮಿಕ ಸಭೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ
ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಬಗ್ಗೆ ಪ್ರಾಥಮಿಕ ಚರ್ಚೆ, ಗೋವಾ ಸಿಎಂ ಪ್ರಮೋದ್ ಸಾವಂತ್ ಬಳಿ ಇಟ್ಟಿರೋ ಸೀಟು ಹಂಚಿಕೆ, ಫಾರ್ಮುಲಾ ಬಗ್ಗೆ ಚರ್ಚೆ, ಲೋಕಸಭೆ ಚುನಾವಣೆಯಲ್ಲಿ 4-6 ಸ್ಥಾನದ ಬೇಡಿಕೆ ಬಗ್ಗೆ ಕುಮಾರಸ್ವಾಮಿರಿಂದ ವಿಷಯ ಪ್ರಸ್ತಾಪವಾಗಿದೆ ಎಂಬುದು ಸದ್ಯದ ಮಾಹಿತಿ.
ಅಲ್ಲದೇ ಲೋಕಸಭೆ ಚುನಾವಣೆ ಎಲ್ಲೆಲ್ಲಿ ಜಂಟಿ ಸಮಾವೇಶ ನಡೆಸಬೇಕು? ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಯಾವ ರೀತಿ ಹೋರಾಟಗಳನ್ನ ನಡೆಸಬೇಕು? ಅದಕ್ಕೆ ರೂಪುರೇಷೆಗಳು ಹೇಗಿರಬೇಕು? ಎನ್ನುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇದರೊಂದಿಗೆ ಸಚಿವ ಜಮೀರ್ ಅಹ್ಮದ್ ಖಾನ್ ತೆಲಂಗಾಣ ಚುನಾವಣಾ ಪ್ರಚಾರದ ಬಗ್ಗೆ ನೀಡಿದ ಹೇಳಿಕೆ, ಸಿಎಂ ಪುತ್ರ ಯತೀಂದ್ರ ವಿಡಿಯೋ ವಿಚಾರ, ರೈತರಿಗೆ ಅನ್ಯಾಯ, ಗ್ಯಾರಂಟಿಗಳ ವೈಫಲ್ಯದ ಜಂಟಿ ಹೋರಾಟ ರೂಪಿಸಬೇಕು. ಡಿಕೆ ಶಿವಕುಮಾರ್ ಸಿಬಿಐ ಕೇಸ್ ವಾಪಸ್ ಪಡೆದಿರೋ ಪ್ರಕರಣದಲ್ಲಿ ಮೊದಲ ದಿನದಿಂದಲೇ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.