ಮೈಸೂರು : ಭೂಮಿ ಕಳೆದುಕೊಂಡ ರೈತ ಮಕ್ಕಳಿಗೆ ಕೆಲಸ ಕೊಡದ ಕಾರಣ ರೈತ ಯುವಕ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಪಾರ್ಲೆ ಆಗ್ರೋ ಕಂಪನಿಯ ಹೆಚ್.ಆರ್ ಗಳು ನನ್ನ ಸಾವಿಗೆ ನೇರ ಕಾರಣ ಎಂದು ಪತ್ರ ಬರೆದಿಟ್ಟು ರೈತ ಯುವಕ ನೇಣಿಗೆ ಶರಣಾಗಿದ್ದಾನೆ
ಕೆ ಐ ಎ ಡಿ ಬಿ ವತಿಯಿಂದ ಕೈಗಾರಿಕರಣಕ್ಕೆ ರೈತರ ಭೂಮಿಯನ್ನು ತೆಗೆದುಕೊಂಡು ಅಡಕನಹಳ್ಳಿ , ತಾಂಡ್ಯ , ಕಡಕೋಳ , ತಾಂಡವಪುರ ಹಾಗೂ ಹಿಮಾವು ಗ್ರಾಮಗಳನ್ನು ಒಳಗೊಂಡಂತೆ ಕೈಗಾರಿಕಾ ಪ್ರದೇಶ ನಿರ್ಮಾಣವಾಗಿರುತ್ತದೆ.
ಕೈಗಾರಿಕರಣಕ್ಕೆ ವಶಪಡಿಸಿಕೊಂಡಿರುವ ಭೂಮಿಯ ಯಜಮಾನಿಕೆ ಇದ್ದಂತ ರೈತ ಮಕ್ಕಳಿಗೆ ಅವರ ವಿದ್ಯೆಗೆ ತಕ್ಕಂತೆ ಕೆಲಸ ಕೊಡಬೇಕೆಂಬ ಕಾನೂನು ಇರುತ್ತದೆ.
ಇದಕ್ಕೆ ಸಂಬಂಧಪಟ್ಟಂತೆ 2011 ರಿಂದಲೂ ವಿವಿಧ ಹಂತದಲ್ಲಿ ಹಾಗೂ ರೂಪದಲ್ಲಿ ರೈತ ಸಂಘಟನೆಗಳು ಕಾರ್ಖಾನೆಗಳ ಹಾಗೂ ಇಲಾಖೆಗಳ ವಿರುದ್ಧ ಹೋರಾಟ ಮಾಡಿ ಕೆಲಸ ಕೊಡಿಸುತ್ತಾ ಬಂದಿದೆ.
ದುರದೃಷ್ಟವಶಾತ್ ನಿನ್ನೆ ರಾತ್ರಿ ಸಿದ್ದರಾಜು s/o ಸಿದ್ದೇಗೌಡ ಅಕಡಕನಳ್ಳಿ ಗ್ರಾಮದ ನಿವಾಸಿ ಪಾರ್ಲೆ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಗೆ ಮೇಲ್ಕಂಡ ರೈತನ ಭೂಮಿ ಸರ್ವೆ ನಂಬರ್ 96/1 ಸೇರಿಕೊಂಡಿತ್ತು. ಇದರ ಪ್ರಕಾರ ಸಿದ್ದರಾಜು ಎಂಬ ರೈತ ಯುವಕನಿಗೆ ಪಾರ್ಲೆ ಕಂಪನಿಯಿಂದ ಕೆಲಸ ಕೊಡಬೇಕಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಸಿದ್ದರಾಜು ಸಾಕಷ್ಟು ಬಾರಿ ಕಾರ್ಖಾನೆಗೆ , ಜಿಲ್ಲಾ ಕೈಗಾರಿಕಾ ಕೇಂದ್ರ ದ ಜಾಯಿಂಟ್ ಡೈರೆಕ್ಟರ್ ಗೆ ಹಾಗೂ ಕೆ ಐ ಎ ಡಿ ಬಿ ಅಧಿಕಾರಿಗಳನ್ನು ಭೇಟಿ ಮಾಡಿ ಕೋರಿಕೊಂಡರು ಇನ್ನು ಕೆಲಸ ಸಿಗದೇ ಖಿನ್ನತೆಗೆ ಒಳಗಾಗಿ , ಮನ ನೊಂದು ” ತನ್ನ ಸಾವಿಗೆ ಪಾರ್ಲೆ ಆಗ್ರೋ ಕಂಪನಿಯ ಹೆಚ್ ಆರ್ ಗಳಾದ ಮುಸಿದುಲ್ಲಾಕ ಹಾಗೂ ರಾಮ್ ಪ್ರಸಾದ್ ಅವರೇ ಕಾರಣ. ಇವರಿಬ್ಬರಿಗೂ ತಕ್ಕ ಶಿಕ್ಷೆಯಾಗಬೇಕು ಹಾಗೂ ಬೇರೆ ರೈತ ಮಕ್ಕಳಿಗೆ ಈ ರೀತಿ ಅನ್ಯಾಯವಾಗಬಾರದು” ಎಂಬ ಮರಣ ಪತ್ರವನ್ನು ಬರೆದು ನೇಣಿಗೆ ಶರಣಾಗಿದ್ದಾನೆ.
ಹೋರಾಟ ಮಾಡುವ ಪ್ರಕ್ರಿಯೆಯಲ್ಲಿ ಪ್ರಾಣ ಕಳೆದುಕೊಂಡ ರೈತನ ಮನೆಯವರ ಮೇಲೂ ಪೊಲೀಸ್ ಠಾಣೆಯಲ್ಲಿ ಕಂಪನಿಯವರು ದೂರು ದಾಖಲು ಮಾಡಿರುತ್ತಾರೆ.
ಮೃತ ದೇಹವನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತರಲಾಗಿದೆ. ಸುಮಾರು ೧೦ ಘಂಟೆ ಸಮಯಕ್ಕೆ ಮೃತ ದೇಹವನ್ನು ಸಂಬಂಧಿಕರಿಗೆ ಕೊಡುವ ನಿರೀಕ್ಷೆ ಇದೆ. ಜಿಲ್ಲಾಡಳಿತ ಹಾಗೂ ಕಂಪನಿಯ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ