ಚಾಮರಾಜನಗರ : ಬುಧವಾರ ತಡರಾತ್ರಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ವೈಶಂಪಾಳ್ಯ ಗ್ರಾಮದ ಜಮೀನೊಂದರಲ್ಲಿ ಕಾಡಾನೆಗಳ ದಾಳಿಗೆ ಭಾಳೆ ಫಸಲು ನಾಶವಾದ ಘಟನೆ ನಡೆದಿದೆ.
ಜಿಲ್ಲೆಯ ಹನೂರು ತಾಲ್ಲೂಕಿನ. ವೈಶಂಪಾಳ್ಯ ಗ್ರಾಮದ ರಾಮಸ್ವಾಮಿ ಎಂಬುವರ ಜಮೀನಿನಲ್ಲಿ ತಡರಾತ್ರಿ ಕಾಡಾನೆ ಧಾಳಿಗೆ ಅಪಾರ ಪ್ರಮಾಣ ಭಾಳೆ ಫಸಲು ನಾಶವಾಗಿದ್ದು ಬೆಳ್ಳಂಬೆಳಗ್ಗೆ ಜಮೀನಿಗೆ ತೆರಳಿದಂತ ರೈತನಿಗೆ ಈ ಘಟನೆ ಬೆಳಕಿಗೆ ಬಂದಿದೆ
ಈ ಭಾಗದ ಜಮೀನುಗಳಿಗೆ ಸಮೀಪದ ಅರಣ್ಯ ಪ್ರದೇಶದಿಂದ ಕಾಡಾನೆಗಳು ಆಗಾಗ್ಗೆ ಆಗಮಿಸಿ ಜಮೀನಿನಲ್ಲಿದ್ದಂತಹ ವಿವಿಧ ಕೃಷಿ ಪರಿಕರಕಗಳು ಹಾಗೂ ವಿವಿಧ ಫಸಲನ್ನು ತುಳಿದು ನಾಶಪಡಿಸುತ್ತಿವೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅರಣ್ಯಾಧಿಕಾರಿಗಳ ಆ ಗಮನಕ್ಕೆ ತಂದಿದ್ದೇವೆ ಆದರೆ ಕಾಡಾನೆಗಳ ಉಪಟಳ ಇನ್ನು ಕೂಡ ನಿಂತಿಲ್ಲ ಆದ್ದರಿಂದ ಅರಣ್ಯಾಧಿಕಾರಿಗಳು ಇತ್ತ ಆಗಮಿಸಿ ಕಾಡಾನೆಯ ಉಪಟಳ ಕಡಿವಾಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಬೆಳೆ ನಾಶವಾಗಿರುವ ಬಗ್ಗೆ ನಷ್ಟ ಪರಿಹಾರವನ್ನು ಒದಗಿಸಬೇಕು ಎಂದು ರೈತ ರಾಮಸ್ವಾಮಿ ತಮ್ಮ ಆಳಲನ್ನು ತೋಡಿ ಕೊಂಡಿದ್ದಾರೆ .