ಚಾಮರಾಜನಗರ : ಬುಧವಾರ ತಡರಾತ್ರಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹನೂರು ಭಾಗದಲ್ಲಿ ತಡ ರಾತ್ರಿ ಸುರಿದ ಭಾರಿ ಮಳೆಯಾಗಿದ್ದು, ಎರಡು ಮೂರು ಮನೆಗಳು ನೆಲ ಕಚ್ಚಿದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸದೊಡ್ಡಿ ಗ್ರಾಮದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಗ್ರಾಮದ ವೆಂಕಟಶೆಟ್ಟಿ ಮತ್ತು ರಂಗಯ್ಯರವರ ಮನೆಗಳು ಕುಸಿತಗೊಂಡಿದೆ.
ಮಳೆಯಿಂದ ಮನೆ ಕಳೆದುಕೊಂಡು ಕಂಗಲಾಗಿರುವ ವೆಂಟಕಶೆಟ್ಟಿ ಮತ್ತು ರಂಗಯ್ಯರವರುಗಳು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ , ಪ್ರಕೃತಿ ವಿಕೋಪ ಯೋಜನೆಯಡಿ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.