ಮೈಸೂರು : ಸಿದ್ದರಾಮಯ್ಯ ಜಾತಿ ಗಣತಿ ವರದಿ ಬಿಡುಗಡೆಯ ನಾಟಕವಾಡುತ್ತಿದ್ದಾರೆ ಎಂದು
ಮೈಸೂರಿನಲ್ಲಿ ಸಿದ್ದರಾಮಯ್ಯ ವಿರುದ್ದ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದಾಗಲೇ ವರದಿ ಬಿಡುಗಡೆ ಮಾಡಬಹುದಿತ್ತು, ಆದರೆ ಮಾಡಲಿಲ್ಲ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇವರೇ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು.ಆಗಲೂ ವರದಿ ಬಿಡುಗಡೆ ಮಾಡಲಿಲ್ಲ.ಆಗ ಕುಮಾರಸ್ವಾಮಿ ಸಿಎಂ ಆಗಿದ್ದರು ಸಾಧ್ಯವಾಗಲಿಲ್ಲ ಎಂದು ಈಗ ಹೇಳುತ್ತಿದ್ದಾರೆ.
ಆಗ ಕುಮಾರಸ್ವಾಮಿ ಒಪ್ಪದಿದ್ದರೇ ಸರ್ಕಾರದಿಂದ ಹೊರಬಹುದಿತ್ತು.ಈಗ ಮತ್ತೆ ಜಾತಿಗಣತಿ ವರದಿ ಬಿಡುಗಡೆ ನಾಟಕವಾಡುತ್ತಿದ್ದಾರೆ.ಇದಕ್ಕೆ ವೀರಶೈವಲಿಂಗಾಯತ ಹಾಗು ಒಕ್ಕಲಿಗ ಸಮುದಾದದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಎರಡು ಸಮುದಾಯದ ಮಠಾಧಿಪತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಜಾತಿ ಗಣತಿ ವರದಿ ಬಿಡುಗಡೆ ಸಾಧ್ಯವಿಲ್ಲ ಎಂದರು.
ಜಾತಿ ಗಣತಿ ವಿಚಾರ ಮುಂದಿಟ್ಟುಕೊಂಡು ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಸಿದ್ದರಾಮ್ಮಯ್ಯ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದರು