ಮೈಸೂರು : ಹಸುವಿನ ಮೇಲೆ ದಾಳಿ ನಡೆಸಿ, ದನಗಾಹಿಯ ಮೇಲೂ ಹುಲಿ ಎರಗಿರುವ ಘಟನೆ ನಂಜನಗೂಡು ತಾಲೂಕಿನ ಮಹದೇವ ನಗರ ಗ್ರಾಮದಲ್ಲಿ ನಡೆದಿದೆ.
ಹಸು ರಕ್ಷಿಸಲು ಹೋದ ದನಗಾಹಿ ಮೇಲೆ ಹುಲಿ ದಾಳಿ ಮಾಡಿದೆ. ಹುಲಿದಾಳಿಗೆ ಸಿಲುಕಿದ ವೀರಭದ್ರಭೋವಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಮೀಪದ ಮಹದೇವ ನಗರದ
ಗ್ರಾಮದ ಮತ್ತಿ ಮರದ ಜೇನುಕಟ್ಟೆ ಬಳಿ ಜಾನುವಾರು ಮೇಯಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಹಸು ಹಾಗೂ ಕರುವಿನ ಮೇಲೆ ಹುಲಿ ದಾಳಿ ಮಾಡಿದೆ
ಹುಲಿ ದಾಳಿಯಿಂದ ಹಸು ರಕ್ಷಿಸಲು ಹೋದ ವೇಳೆ
ವೀರಭದ್ರಬೋವಿ ಮೇಲೂ ಹುಲಿ ದಾಳಿ ಮಾಡಿದ್ದು
ಗಂಭೀರ ಗಾಯಗೊಂಡಿರುವ ವೀರಭದ್ರ ಬೋವಿ.
ಮೈಸೂರಿನ ಖಾಸಗಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ರವಾನೆ.
ಸ್ಥಳಕ್ಕೆ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೊರ ಹಾಕಿದ್ದಾರೆ
