ದೆಹಲಿ : ಕಾವೇರಿ ನದಿಯಿಂದ ಮುಂದಿನ 15 ದಿನಗಳವರೆಗೆ ಪ್ರತಿದಿನ ತಲಾ 2,600 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಆದೇಶ ನೀಡಿದೆ.
ಈ ಆದೇಶದಿಂದ ರಾಜ್ಯಕ್ಕೆ ಮತ್ತೆ ಆಘಾತ ಉಂಟಾಗಿದೆ. ಈಗಾಗಲೇ ರಾಜ್ಯಾದ್ಯಂತ ಕಾವೇರಿಗಾಗಿ ರೈತರು ಹೋರಾಟ ಮಾಡುತ್ತಿದ್ದಾರೆ ಇತ್ತ ಕನ್ನಡ ಪರ ಸಂಘಟನೆಗಳು ಕೂಡ ರೈತರ ಪರ ನಿಂತಿದೆ. ಈ ನಡುವೆ ಈ ಆದೇಶ ಬಂದಿದ್ದು ಉರಿವ ಬೆಂಕಿಗೆ ತುಪ್ಪ ಸವರಿದ ಹಾಗೆ ಹಾಗಿದೆ.