ಮೈಸೂರು : ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಸಮಿತಿ ಸದಸ್ಯ ಕೂಡ್ಲೂರು ಶ್ರೀಧರ್ ಮೂರ್ತಿ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಗೋಷ್ಠಿ ನಡೆಸಿ
ಬಿಎಸ್ವೈ ಪುತ್ರ ಬಿ ವೈ ವಿಜಯೇಂದ್ರರನ್ನು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ವೀರಶೈವ, ಹಿಂದುಳಿದ ವರ್ಗ, ಅಲ್ಪಂಖ್ಯಾತರು ಸೇರಿದಂತೆ ಎಲ್ಲಾ ವರ್ಗಗಳ ಜನರ ಬೆಂಬಲ ಇವರಿಗಿದೆ ಎಂದರು.
ಈಗಾಗಲೇ ವಿಜಯೇಂದ್ರ ಅವರು ರಾಜ್ಯ ಉಪಾಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿ ಜನ ಪ್ರಿಯನಾಯಕರಾಗಿ ಹೊರಹೊಮ್ಮಿದ್ದಾರೆ.
ಹಾಗಾಗಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಬೇಕು
ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ಸೋಲಿಗೆ ಬಿ ಎಸ್ ವೈ ಮುಂದಾಳತ್ವ ಇಲ್ಲದೆ ಇದ್ದಿದ್ದೆ ಕಾರಣ.
ಹಾಗಾಗಿ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯ ವಾಹಿನಿಗೆ ತರಬೇಕು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾದರೆ ಮತ್ತು ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿಸ ಬೇಕಾದರೆ ಬಿಎಸ್ವೈ ಪುತ್ರ ವಿಜಯೇಂದ್ರ ಅವರನ್ನು ರಾಜ್ಯ ಅಧ್ಯಕ್ಷನ್ನಾಗಿ ಮಾಡಬೇಕು ಎಂದು ಎಸ್ ಸಿ ಮೋರ್ಚಾದ ರಾಜ್ಯ ಸಮಿತಿ ಸದಸ್ಯ ಕುಡ್ಲೂರು ಆರ್ ಶ್ರೀಧರಮೂರ್ತಿ ಒತ್ತಾಯ ಮಾಡಿದರು