ಮೈಸೂರು : ಒಂದು ಲಕ್ಷಕ್ಕೆ ನೂರು ಮೆಡಿಕಲ್ ಸೀಟ್ ಇರಬೇಕು ಎಂಬ ಕೇಂದ್ರದ ಮಾನದಂಡ ವಿಚಾರ.
ಇದನ್ನು ವಿರೋಧಿಸಿ ಪ್ರಧಾನಿಗೆ ಪತ್ರ ಬರೆಯಲಾಗುತ್ತಿದೆ.
ಇದು ಮಲತಾಯಿ ಧೋರಣೆ.ಇದನ್ನ ಈಗಾಗಲೇ ವಿರೋಧಿಸಿದ್ದೇವೆ.ಇದೇ ವಿಚಾರವಾಗಿ ಪ್ರಧಾನಿ ಪತ್ರ ಬರೆಯಲಾಗುತ್ತೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಈಗಾಗಲೇ ಇವರು ಹೇಳಿರುವ ಮಾನದಂಡಕ್ಕಿಂತ ಹೆಚ್ಚಾಗಿ ಮೆಡಿಕಲ್ ಸೀಟ್ ಗಳು ಇದೆ.ಮುಂದೆ ಬೇರೆ ಜಿಲ್ಲೆಯಲ್ಲು ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕಿದೆ.
ಜೊತೆ ಖಾಸಗಿ ಕಾಲೇಜು ಸ್ಥಾಪನೆಗು ಅನುಮತಿ ಕೇಳಿದ್ದಾರೆ.ಇದರಿಂದ ಕೇಂದ್ರದ ಈ ನಿರ್ಧಾರವನ್ನ ನಾವು ಪಾಲನೆ ಮಾಡಲು ಕಷ್ಟವಾಗುತ್ತೆ ಎಂದರು.
ಇನ್ನು ಮೂರು ತಿಂಗಳಲ್ಲಿ ಮೈಸೂರು ಮೆಡಿಕಲ್ ಕಾಲೇಜು ಸಮಸ್ಯೆ ಬಗೆಹರಿಸುತ್ತೇನೆ.ಮಾಡದಿದ್ದಾಗ ಈ ಬಗ್ಗೆ ಕೇಳಿ.
150 ರಿಂದ 200 ಉದ್ಯೋಗ ಭರ್ತಿಗೆ ಬೇಡಿಕೆ ಇದೆ.
ಇದನ್ನ ಮೂರು ತಿಂಗಳಲ್ಲಿ ಬಗೆ ಹರಿಸಲಾಗುತ್ತೆ.
ಶತಮಾನೋತ್ಸವ ಹಿನ್ನೆಲೆ ಆಸ್ಪತ್ರೆ ಕಟ್ಟಡ ನವೀಕರಣ ಮಾಡಲಾಗುತ್ತೆ.ಇದರಿಂದ ವೈದ್ಯಕೀಯ ಸಲಕರಣೆ ಬರಲು ತಡವಾಗುತ್ತೆ.ಜೊತೆ ಆಸ್ಪತ್ರೆಯಲ್ಲಿ ಮಗು ಕಳ್ಳತನ ಇದೆಲ್ಲದ ಬಗ್ಗೆ ನಿಗ ಇಡಲು ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುತ್ತೆ ಎಂದು ಹೇಳಿದರು.
ರಾಮನಗರದಲ್ಲು ಮೇಡಿಕಲ್ ಕಾಲೇಜು,ಕನಕಪುರದಲ್ಲು ಮೆಡಿಕಲ್ ಸ್ಥಾಪನೆ ಮಾಡಲಾಗುತ್ತೆ.ರಾಮನಗರದಲ್ಲಿ ಕೆಲಸ ನಡೆಯುತ್ತಿದೆ.ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಆರಂಭವಾಗಿದೆ.ಕನಕಪುರದಲ್ಲಿ ಮೆಡಿಕಲ್ ಸ್ಥಾಪನೆ ಮಾಡುವ ಬಗ್ಗೆ ಸಿಎಂ ಡಿಸಿಎಂ ಜೊತೆ ಚರ್ಚೆ ಮಾಡಲಾಗುತ್ತೆ ಎಂದರು