ಮೈಸೂರು : ಸಂತೋಷ್ ರಾವ್ ಮಾನಸ್ಥಿಕ ಅಸ್ವಸ್ಥ ಅಲ್ಲ.
ಎರೆಡು ಮೂರು ವರ್ಷದ ಮಕ್ಕಳಿಗೆ ಇರುವ ಬುದ್ಧಿ ಮಾತ್ರ ಇರುತ್ತೆ.ನಾನು ಸಹ ಜಡ್ಜ್ ಮೆಂಟ್ ಓದಿದ್ದೇನೆ.
ಸಂತೋಷ್ ರಾವ್ ಮುಗ್ಧ ಎಂದು ವೈದ್ಯ ದುರ್ಗೆಶ್ ಹೇಳಿದ್ದಾರೆ.
ನಿಜವಾದ ಆರೋಪಿಯನ್ನ ಬಿಟ್ಟು ಮುಗ್ಧನನ್ನ ಆರೋಪಿ ಮಾಡಿದ್ದಾರೆ.ಸೌಜನ್ಯ ಯಾವಗ ಸತ್ತಿದ್ದು ಎಲ್ಲಿಯೂ ಹೇಳಿಲ್ಲ.201 ಸೆಕ್ಷನ್ ಎಲ್ಲರೂ ಮರೆತು ಬಿಟ್ಟಿದ್ದಾರೆ.
376 ಸೆಕ್ಷನ್ ಸಹ ಡೌಟುಫುಲ್ ಅಂತಾರೇ.
ಪೊಲೀಸ್ ಹಾಗೂ ವೈದ್ಯರ ವೈಫಲ್ಯ ಈ ಪ್ರಕರಣದಲ್ಲಿ ಕಾಣುತ್ತಿದೆ. ರೇಪಿಸ್ಟ್ ಗಳು ಬಾಟಲಿನಲ್ಲಿ ಏನನ್ನೋ ಕುಡಿಸಿದ್ದಾರೆ. ಇದು ವೆಲ್ ಪ್ಲಾನ್ಡ್ ಕ್ರೈಂ.
ಯಾರೊ ಗೊತ್ತಿರುವವರೇ ಮಾಡಿರುವುದು.
ಸೌಜನ್ಯ ಮೃತ ದೇಹದ ಬಳಿ ದೊರೆತ ಮಣ್ಣು ಹಾಗೂ ಬಟ್ಟೆಯಲ್ಲಿದ್ದ ಮಣ್ಣು ಒಂದೇ. ಆದರೆ ಆರೋಪಿ ಬಟ್ಟೆಯಲ್ಲಿ ಮಣ್ಣುನ ಸಾರಂಶ ಸಿಕ್ಕಿಲ್ಲ.
ಸೌಜನ್ಯಳ ಬಲಕೈ ಮೇಲೆ ವಾಚ್ ನ ಗುರುತು ಸಿಕ್ಕಿದೆ.
ತಲೆ ಮರಿಸಿಕೊಂಡ ವ್ಯಕ್ತಿ ಬಲಗೈಯಲ್ಲಿ ವಾಚ್ ಕಟ್ಟುತ್ತಾನ ನೋಡುಬೇಕಿತ್ತು ಎಂದರು.
ಇಬ್ಬರು ಅಥವಾ ಮೂವರು ರೇಪ್ ಮಾಡಿರುವ ಸಾಧ್ಯತೆ ಇದೆ.ಆರೋಪಿಗಳಿಗೆ ಇದೇ ಮೊದಲು ರೇಪ್ ಮಾಡಿರುವ ಹಾಗೇ ಕಂಡು ಬರುತ್ತಿಲ್ಲ.ರೆಗ್ಯುಲರ್ ಆಗಿ ರೇಪ್ ಮಾಡುತ್ತಾ ಬಂದಿದ್ದಾರೆ.ಅವರಿಗೆ ಎಲ್ಲವೂ ಗೊತ್ತಿದೆ.
ರೇಪ್ ಮಾಡುವ ಸ್ಥಳ, ಸಮಯ ಎಲ್ಲವೂ ಗೊತ್ತಿದೆ ಮಾಡಿರುವುದು. ಗುಪ್ತಾಂಗಕ್ಕೆ ಮಣ್ಣನ್ನ ಹಾಕಿದ್ದಾರೆ.
ರೇಪ್ ಮಾಡಿದವರು ಸಾಕ್ಷಿಗಳನ್ನ ನಾಶ ಮಾಡಿದ್ದಾರೆ.
ಸೌಜನ್ಯ ಕೊಲೆ ಮಾಡಿದವರು, ರೇಪಿಸ್ಟ್ ಗಳು ಹಾಗು ಸ್ಥಳೀಯರೇ.ಈ ಕೇಸ್ ನ್ನ ಹೀಗೆ ಸುಮನೆ ಬಿಡಲು ಸಾಧ್ಯವಿಲ್ಲ.ನ್ಯಾಯಾಲಯದಲ್ಲಿ ಹೋರಾಟ ಮುಂದುವರೆಸಬೇಕು ಎಂದರು.