ಮೈಸೂರು : ತಂದೆಯಿಂದಲೇ ಹಸುಗೂಸು ಕೊಲೆಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕು ಮಾಕೊಡು ಗ್ರಾಮದಲ್ಲಿ ನಡೆದಿದೆ.
ಕೆರೆಗೆ ಎಸೆದು ಮಗು ಕೊಂದ ಪಾಪಿ ತಂದೆ ಗಣೇಶ್.
ಮೂರು ಮಕ್ಕಳಿರುವ ಗಣೇಶ್ ಪತ್ನಿ ಸಾವನ್ನಪ್ಪಿದ್ದರು.
ಎರಡು ಹೆಣ್ಣು ಮಕ್ಕಳನ್ನು ಪತ್ನಿ ಲಕ್ಷ್ಮಿ ತಾಯಿ ಅಂಜನಮ್ಮ ನೋಡಿಕೊಳ್ಳುತ್ತಿದ್ದರು.ಗಂಡು ಮಗುವನ್ನು ನಾನು ಕೊಡುವುದಿಲ್ಲ ಅಂತ ಹೇಳಿ ಕರೆತಂದಿದ್ದ ಗಣೇಶ್.
ಹೆರಿಗೆ ವೇಳೆ ಮಗುವಿನ ತಾಯಿ ಮೃತಪಟ್ಟಿದ್ದರು.
ಬೆಂಗಳೂರಿನ ದೊಡ್ಡಸನ್ನೆ ಗ್ರಾಮದಲ್ಲಿ ವಾಸವಿದ್ದ ಗಣೇಶ್- ಲಕ್ಷ್ಮಿ.ಲಕ್ಷ್ಮಿ ಮೃತಳಾದ ಬಳಿಕ ಮಗುವಿನ ಜತೆ ಊರಿಗೆ ಬಂದು ವಾಸವಾಗಿದ್ದ.ತನ್ನ ತಾಯಿ ಜತೆ ವಾಸವಾಗಿದ್ದ ಗಣೇಶ್.
ಮಗುವಿನ ಹಾರೈಕೆಯನ್ನು ತಾಯಿ ಹೆಗಲಿಗೆ ಹೊರಿಸಿದ್ದ.
ನಾಲ್ಕು ದಿನಗಳ ಹಿಂದೆ ತಾಯಿ ಜತೆ ಜಗಳವಾಡಿಕೊಂಡು ಮಗು ತೆಗೆದುಕೊಂಡು ಹೋಗಿದ್ದ.ಬಳಿಕ ಕೆರೆಯಲ್ಲಿ ಬಿಸಾಡಿ ಕೊಲೆಗೈದಿದ್ದ.ಈ ಸಂಬಂಧ ಗಣೇಶ್ ಅತ್ತೆ ಅಂಜನಮ್ಮ ಅವರಿಂದ ದೂರು, ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ