ಮೈಸೂರು : ಕಾಂಗ್ರೆಸ್ ಗೆ ಬೆಂಬಲ ಕೊಡ್ತೀವಿ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ
ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿ.ಎಂ.ಇಬ್ರಾಹಿಂ ಇನ್ನೂ ಕಾಂಗ್ರೆಸ್ ಮನಸ್ಥಿತಿಯಲ್ಲಿದ್ದಾರೆ.
ಅವರ ರಾಜಕೀಯ ಆರಂಭವಾದ್ದೂ ಕಾಂಗ್ರೆಸ್ ನಿಂದಲೇ.
ಹಾಗಾಗಿ ಹುಟ್ಟುಗುಣ ಸುಟ್ಟರೂ ಹೋಗೊಲ್ಲ.
ಅವರಲ್ಲಿ ಕಾಂಗ್ರೆಸ್ ತತ್ವಗಳು ಇನ್ನೂ ಜೀವಂತವಾಗಿದೆ ಅನ್ಸುತ್ತೆ.ನಾವು ಸೈದ್ದಾಂತಿಕ ರಾಜಕಾರಣಮಾಡ್ತಿದ್ದೀವಿ.
ಜನರಿಗೆ ಎಲ್ಲವೂ ಗೊತ್ತಾಗುತ್ತಿದೆ.
ಜೆಡಿಎಸ್- ಬಿಜೆಪಿ ಹಿಂದಿನಿಂದಲೂ ಒಂದೇ ಮನಸ್ಥಿತಿ.
ಈಗ ಅಧಿಕೃತವಾಗಿ ಮೈತ್ರಿ ಆಗಿದ್ದಾರೆ ಅಷ್ಟೇ ಎಂದರು.
ಜೆಡಿಎಸ್ ನ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ನತ್ತ ಬರುವ ವಿಚಾರ. ಜೆಡಿಎಸ್ ನಲ್ಲಿ ಈಗ ಜಾತ್ಯಾತೀತ ಮನೋಭಾವ ಇಲ್ಲ.ಜಾತ್ಯಾತೀತತೆ ಧಿಕ್ಕರಿಸಿ ಕೋಮುವಾದಿ ಬಿಜೆಪಿ ಜೊತೆ ಹೋಗ್ತಿದ್ದಾರೆ.
ಹಾಗಾಗಿ ಅಲ್ಪಸಂಖ್ಯಾತರು ಅಲ್ಲ, ಎಲ್ಲರೂ ಬರ್ತಿದ್ದಾರೆ.
ಅಲ್ಪ ಸಂಖ್ಯಾತರು ಮಾತ್ರ ಅಲ್ಲ, ಸಾಕಷ್ಟು ಜನ ಬರುತ್ತಿದ್ದಾರೆ.ಬರುವವರನ್ನ ಆಯ್ಕೆ ಮಾಡಿ, ಮಾನದಂಡಗಳ ಮೂಲಕ ತೆಗೆದುಕೊಳ್ತಿವಿ.
ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ವಿಚಾರ.
ನಮ್ಮಲ್ಲಿ ಯಾವುದೇ ಆತಂಕ ಕಲಹ ಇಲ್ಲ.
ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರೂ ಸ್ವತಂತ್ರರು. ಎಲ್ಲಾ ಕಡೆಯೂ ಭಿನ್ನಾಭಿಪ್ರಾಯ ಇದ್ದುದ್ದೆ, ಆದರೆ ಅದನ್ನ ಕಾಂಗ್ರೆಸ್ ಶಮನ ಮಾಡಿಕೊಳ್ಳುತ್ತೆ. ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು