ಮೈಸೂರು : ಬುದ್ಧ ಗುರುಗಳು ಜ್ಞಾನವನ್ನು ಕೊಟ್ಟಿದ್ದಾರೆ.
ವೈದಿಕರು ಅಜ್ಞಾನವನ್ನು ಸಮಾಜಕ್ಕೆ ಕೊಡ್ತಾ ಇದ್ದಾರೆ.
ಜನಿವಾರದಿಂದ ಜಾತಿ ಗುರುತಿಸುತ್ತಾರೆ.
ಹಾಕದವನು ಒಂದು, ಹಾಕಿರೋನು ಒಂದು.
ಕೈಗೆ ಕಾಲಿಗೆ ಜಾತಿ ಇಟ್ಟಿರೋದು ಹಿಂದೂ ಧರ್ಮ.
ಹಿಂದೂ ಧರ್ಮ ನಮ್ಮ ಧರ್ಮ ಅಲ್ಲ.
ನಮ್ಮ ಧರ್ಮ ಬೌದ್ಧ ಧರ್ಮ.
ಬ್ರಾಹ್ಮಣರು ವೈದಿಕರು ಬೇರೆ ದೇಶದಿಂದ ಬಂದಿರೋರು.
2 ಸಾವಿರ ವರ್ಷದಿಂದ ಇವರು ಬೇರೆ ಅವರಿಗೆ ಸಂಸ್ಕೃತ ಕಲಿಸಲಿಲ್ಲ.ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು.
ಶೂದ್ರನನ್ನು ದೇವರು ಸೃಷ್ಠಿ ಮಾಡಿರೋದೆ ಬ್ರಾಹ್ಮಣರ ಸೇವೆ ಮಾಡಲು ಎಂದು ತಿಳಿದಿದ್ದಾರೆ
ಇಂತಹ ಧರ್ಮ ನಮಗೇಕೆ ಬೇಕಿಲ್ಲ.
ಹಿಂದೂ ಧರ್ಮದಲ್ಲಿ ಶೂದ್ರ ಎಂದರೆ ಸೂಳೆ ಮಗ ಎಂದು.
ಇಂತಹ ಧರ್ಮ ನಮಗೆ ಬೇಡಾ.
ಒಕ್ಕಲಿಗರು ಸಂಸ್ಕೃತಿ ಹೀನರು.
ಈ ಮಾತು ನನ್ನದು ಅಲ್ಲ ಕುವೆಂಪು ಅವರದ್ದು.
ನಾನು ಹೇಳಿದ್ರೆ ನನ್ನ ಹೊಡೆಯೋಕೆ ಬರ್ತಾರೆ.
ನಿಜ ಹೇಳಿದವರನ್ನು ಯಾರು ಬಿಡಲ್ಲ.
ಆದರೇ ನಿಜ ಹೇಳಿಯೇ ಸಾಯಬೇಕು.
ಎಲ್ಲರೂ ದೇವರ ಬಗ್ಗೆ ದೊಡ್ಡ ಚಿಂತೆ ಮಾಡ್ತಾರೆ.
ದೇವರು ಯಾಕೆ ಕೊರೋನಾ ತಡೆಯಲಿಲ್ಲ.
ದೇವಸ್ಥಾನದಲ್ಲಿ ಕಳ್ಳತನವಾಗುವುದನ್ನು ದೇವರು ಯಾಕೆ ತಡೆಯಲಿಲ್ಲ.
ದೇವರೆ ಕಳ್ಳನಾಗಿದ್ದಾನೋ ಏನೋ.
ಎಲ್ಲರೂ ರಾಮ ರಾಜ್ಯದ ಬಗ್ಗೆ ಹೇಳ್ತಾರೆ.
11 ಸಾವಿರ ವರ್ಷ ರಾಮ ರಾಜ್ಯಭಾರ ಎಂದು ಹೇಳ್ತಾರೆ.
ವಾಸ್ತವವಾಗಿ ಅದು 11 ವರ್ಷ.
ರಾಮ ತುಂಬು ಗರ್ಭಿಣಿಯನ್ನು ಕಾಡಿಗೆ ಹೋಡಿಸಿದ.
ಆಕೆ ಏನು ಆದಳು ಅಂತಾ ರಾಮ ಕೇಳಲಿಲ್ಲ.
ಅಶ್ವಮೇಧ ಯಾಗದಲ್ಲಿ ಮಕ್ಕಳು ಹೆಂಡತಿ ಗೊತ್ತಾಗೋದು.
15 ವರ್ಷ ಹೆಂಡತಿ ಮಕ್ಕಳನ್ನು ಕೇಳದೇ ಇರೋದು ಈ ರಾಮ ಎಂತವನು.
ಶೂದ್ರರು ತಲೆ ಬೆಳೆಸಿಕೊಳ್ಳದೇ ಬ್ರಾಹ್ಮಣರ ಬಳಿ ಹೋಗ್ತಾರೆ.
ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು.
ರಾಮ ರಾಜ್ಯ ಎಂದರೆ ಶೂದ್ರರನ್ನು ಕೊಲ್ಲುವ ರಾಜ್ಯ ಎಂದು ಭಗವಾನ್ ಹೇಳಿದರು
ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಕುವೆಂಪು ಕಡೆ ಬೊಟ್ಟು ಮಾಡಿದ ಪ್ರೊ ಭಗವಾನ್

Leave a comment
Leave a comment