ಮೈಸೂರು : ರೈತರ ಜಮೀನುಗಳಿಗೆ ಲಗ್ಗೆ ಇಟ್ಟ ಕಾಡಾನೆಗಳು, ಕಾಡಾನೆಗಳ ದಾಳಿಗೆ ಬೆಳೆನಾಶ, ರೈತರು ಕಂಗಾಲು ನಂಜನಗೂಡು ತಾಲೂಕಿನ ಚಂದ್ರವಾಡಿ ಗ್ರಾಮದಲ್ಲಿ ಘಟನೆ.
ನೆಲ್ಲಿತಾಳಪುರ ಗ್ರಾಮದ ರೈತರಾದ ಮನೋಹರ್, ದಿನೇಶ್ ಎಂಬುವವರ ಜಮೀನಿಗೆ ಕಾಡಾನೆಗಳ ದಾಳಿ.
ಸುಮಾರು ಎಂಟು ಎಕರೆಯಷ್ಟು ಬಾಳೆ ಬೆಳೆ ತುಳಿದು ಹಾಕಿರುವ ಆನೆಗಳು.ಜಮೀನಿನ ಸುತ್ತಲು ಅಳವಡಿಸಲಾಗಿದ್ದ ಸೋಲಾರ್ ತಂತಿ ಬೇಲಿ ಕಿತ್ತು ಹಾಕಿರುವ ಆನೆಗಳು.
ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಾಳೆ ನಾಶ.
ಸಾಲ ಮಾಡಿ ಬೆಳೆದ ಬೆಳೆ ಕೈಸೇರುವಷ್ಟರಲ್ಲಿ ಕಾಡು ಪ್ರಾಣಿಗಳು ಪಾಲು.ಆನೆಗಳ ಹಾವಳಿಯಿಂದ ಜಮೀನುಗಳಿಗೆ ಹೋಗಲು ಆತಂಕದಲ್ಲಿರು ರೈತರು.
ಕಾಡಾನೆಗಳ ತಡೆಗೆ ರೈಲ್ವೆ ಕಂಬಿಯನ್ನು ಅಳವಡಿಸಬೇಕು.
ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರ ಒತ್ತಾಯ.