ಮೈಸೂರು : ಮತ್ತೆ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಎಷ್ಟು ಟಿಎಂಸಿ ನೀರಿದ ಅಂತ ದಾಖಲೆ ತೆಗೆದುಕೊಂಡಿದ್ದಾರೆ.
ಅವರ ಡ್ಯಾಂ ನ ಮಾಹಿತಿ ಕೂಡ ತೆಗೆದುಕೊಂಡಿದ್ದಾರೆ.
ನಮ್ಮ ಡ್ಯಾಂ ಗಳಿಗೆ 7 ರಿಂದ 10 ಸಾವಿರ ಕ್ಯೂಸೆಕ್ ಒಳ ಹರಿವಿದೆ.ನಮ್ಮ ರೈತರ ರಕ್ಷಣೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ.ಬಿಳಿಗುಂಡಲಿಗೆ ಎರಡು ದಿನ ಕಡಿಮೆ ನೀರು ಹೋಗಿದೆ.ಬೆಂಗಳೂರಿಗೆ ಮಳೆಯಾದ ಕಾರಣ ಅದು ಬ್ಯಾಲೆನ್ಸ್ ಆಗಿದೆ.ಅದನ್ನ ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದೇವೆ.ಏನೆ ಆದೇಶ ಬಂದರು ನಮ್ಮ ರೈತರ ಹಿತ ಕಾಯುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು
ಮೇಕೆದಾಟು ವಿಚಾರವನ್ನ ಸಾರ್ವಜನಿಕವಾಗಿ ಮಾತನಾಡಲ್ಲ.
ಕೇಂದ್ರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು.
ಮೇಕೆ ದಾಟು ವಿಚಾರ ನಮ್ಮ ಮೊದಲ ಆದ್ಯತೆ.
ಈ ವಿಚಾರವಾಗಿ ಕೋರ್ಟ್ ಮುಂದೆ ವಾದ ಮಾಡುತ್ತಿದ್ದೇವೆ.ಕೋರ್ಟ್ ಮುಂದೆ ಮತ್ತಷ್ಟು ವಾದ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ನ್ಯಾಯಾಲಯ ಈಗಾಗಲೇ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.ಅವರು ಡ್ಯಾಂ ಕಟ್ಟಿ ನಿಮಗೆ 170 ಟಿಎಂಸಿ ನೀರು ಕೊಡುತ್ತಾರೆ ಎಂದು ಮನದಟ್ಟು ಮಾಡಿದೆ.
ಮೇಕದಾಟು ಯೋಜನೆ ನಮ್ಮ ಆದ್ಯತೆ.
ಡ್ಯಾಂ ಕಟ್ಟಲು ಭೂಮಿ ತೆಗೆದುಕೊಂಡು ವ್ಯವಸ್ಥೆ ಮಾಡುತ್ತಿದ್ದೇವೆ.ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಬೇಕು.ನಮ್ಮ ಜಮೀನಿನಲ್ಲಿ ನಾವು ಏನು ಬೇಕಾದರು ಮಾಡಬಹುದು.ಸರ್ವೆ ಮಾಡಲು ಯಾರ ಅನುಮತಿಯು ಬೇಕಾಗಿಲ್ಲ.ನಮ್ಮ ಕೆಲಸ ನಾವು ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ವಿಚಾರ.
ರಾಜ್ಯದಲ್ಲಿ 192 ತಾಲೂಕು ಬರ ಘೋಷಣೆ ಮಾಡಲಾಗಿದೆ.ಮಳೆ ಬಾರದ ಕಾರಣ ಬರ ಬಂದಿದೆ.
ಕಳೆದ ಬಾರಿಗಿಂತ ಅರ್ಧದಷ್ಟು ಮಳೆ ಬಂದಿದೆ.
ಕಳೆದ ಬಾರಿ ಡಬಲ್ ಮಳೆಯಾಗಿತ್ತು.
ಈಗಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ.
ಆದರು ಸರ್ಕಾರ ಇದನ್ನ ಬ್ಯಾಲೆನ್ಸ್ ಮಾಡುತ್ತೆ ಎಂದು ಹೇಳಿದರು