ಮೈಸೂರು : ಕೇವಲ ಮಹಿಷಾ ದಸರೆಯನ್ನು ಮುಂದಿಟ್ಟು ಜನಪ್ರತಿನಿಧಿಗಳು ರಾಜಕೀಯ ದ್ವೇಷಪುರಿತ ಹೇಳಿಕೆ ನೀಡುವವರು ದಸರೆಯಲ್ಲಿ ನಡೆಯುವ ಅವೈಜ್ಞಾನಿಕ ಶುಲ್ಕಗಳ ಬಗ್ಗೆಯೂ ಮಾತನಾಡಲಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.13ರಂದು ಚಾಮುಂಡಿಬೆಟ್ಟದಲ್ಲಿ ನಡೆಸಲು ಹೊರಟಿರುವ ಮಹಿಷಾ ದಸರಾ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ. ಆದರೆ, ವಾಸ್ತವದಲ್ಲಿ ಶಾಂತಿಯುತ ಜೀವನ ಕಟ್ಟಿಕೊಂಡಿರುವ ಸಾಂಸ್ಕೃತಿಕ ನಗರದ ಮೈಸೂರು ಜನತೆಗೆ ಭಯವ ವಾತಾವಾರಣ ಸೃಷ್ಟಿಸುತ್ತಿದ್ದಾರೆ. ಮಹೋತ್ಸವದ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡಲಾಗುತ್ತಿದೆ. ಟೆಂಡರ್ ಹೆಸರಿನಲ್ಲಿ, ಪ್ರವಾಸಿಗರಿಂದ ನಡೆಯುತ್ತಿರುವ ಸುಲಿಗೆ, ಚಾಮುಂಡಿ ಬೆಟ್ಟ ಮತ್ತು ತಪ್ಪಲಿನ ಪಾರ್ಕಿಂಗ್ ಮತ್ತು ಫಲಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿದರು.
ದಸರಾ ಗೋಲ್ಡ್ ಪಾಸ್ ಉಳ್ಳವರ ಪಾಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ ಸಂಸದ ಪ್ರತಾಪಸಿಂಹ ಹಾಗೂ ಮಹೇಶ್ ಚಂದ್ರಗುರು ಮೇಲೆ ಕಾನೂನು ಕ್ರಮ ಯಾಕೆ ಕ್ರಮ ಕೈಗೊಂಡಿಲ್ಲವೆಂದರು. ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮಾ.ಸ.ಪ್ರವೀಣ್, ರಾಜೇಗೌಡ, ಎಸ್.ನಾಗೇಂದ್ರ, ಸುಂದರ್, ಪ್ರೇಮ್ ಕುಮಾರ್ ಹಾಜರಿದ್ದರು.