ಮೈಸೂರು : ಇಸ್ರೇಲ್ ನಲ್ಲಿ ಮೈಸೂರಿನ ಕುಟುಂಬವೊಂದು ಸಿಲುಕಿಕೊಂಡಿದ್ದು ವೀಡಿಯೋ ಕಾಲ್ ಮೂಲಕ ನಾವು ಸುರಕ್ಷತವಾಗಿದ್ದೇವೆ ಎಂದು ತಿಳಿಸಿದ್ದಾರೆ.
ಚೇತನ್ ಪತ್ನಿ ಶಿಲ್ಪಶ್ರೀ ಹಾಗೂ ಒಂದುವರೆ ವರ್ಷದ ಮಗು
ಸದ್ಯ ಇಸ್ರೇಲ್ನಲ್ಲಿ ಸುರಕ್ಷಿತ.ಮೂಲತಃ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದ ಚೇತನ್.
2 ವರ್ಷದ ಹಿಂದೆ ಉನ್ನತ ಅಧ್ಯಯನಕ್ಕೆ ಇಸ್ರೇಲ್ಗೆ ತೆರಳಿದ್ದ ಚೇತನ್. ಇದೀಗಾ ಇಸ್ರೇಲ್ ನಲ್ಲಿ ಸುರಕ್ಷಿತವಾಗಿದ್ದೇವೆ ಎಂದು ಕುಟುಂಬಸ್ಥರಿಗೆ ವೀಡಿಯೋ ಕಾಲ್ ಮಾಡಿ ತಿಳಿಸಿದ ಚೇತನ್.
ಸದ್ಯ ಇಸ್ರೇಲ್ನ ರೆಹೋವಾತ್ ನಗರದಲ್ಲಿ ಸುರಕ್ಷಿತವಾಗಿರುವ ಚೇತನ್ ಕುಟುಂಬ.
ಅಲ್ಲಿನ ಇನ್ಸ್ಟಿಟ್ಯೂಟ್ ಅವರು ಕೂಡ ಇವರನ್ನ ವಿಚಾರಿಸಿಕೊಳ್ಳುತ್ತಿದ್ದಾರೆ. ಸೈರನ್ ಬಂದಾಗ ಸೇಫ್ಟ್ ರೂಂ ನಲ್ಲಿ ಉಳಿದು ಕೊಳ್ಳುತ್ತಿದ್ದಾರೆ. ಇವರು ಇರುವ ಕಡೆಯ ಸೇಫ್ಟ್ ರೂಂ ಇದೆ. ಆದ್ರೆ ನಮಗೆ ಭಯ ಇದೆ,ಆತನೆ ನಮಗೆ ದೈರ್ಯ ಹೇಳುತ್ತಿದ್ದಾನೆ ಎಂದು ಹೇಳಿರುವ ಚೇತನ್ ಸಹೋದರಿ ಲಾವಣ್ಯ.