ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಠಿ ನಡೆಸಿದರು. ಅ. 13 ರಂದು ಬೆಳಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಐದು ಸಾವಿರಕ್ಕೂ ಹೆಚ್ಚು ಜನ ಜಾಥಾದಲ್ಲಿ ಭಾಗಿ.
ಚಾಮುಂಡಿ ಗೆ ಪೂಜೆ ಮಾಡಿ ಮಹಿಷಾಸುರನ ಮುಂದೆ ಕುಳಿತು ಕೊಳ್ಳುತ್ತೇವೆ.ಬಿ.ಟಿ. ಲಲಿತಾ ನಾಯಕ್ ಳ ಮಗ ಅಂಬೇಡ್ಕರ್ ಪ್ರತಿಮೆಗೆ ಮದ್ಯ ಹಾಕಿದ್ದ.
ಲಲಿತಾ ನಾಯಕ್ ಸಚಿವೆ ಆಗಿದ್ದಾಗ ಆಕೆ ಮಗ ಅಂಬೇಡ್ಕರ್ ಪ್ರತಿಮೆಗೆ ಮದ್ಯ ಕುಡಿಸಲು ಹೋಗಿದ್ದ
ಅಂಬೇಡ್ಕರ್ ಗೆ ಅಪಮಾನ ಮಾಡಿದ ವ್ಯಕ್ತಿಯ ತಾಯಿಯನ್ನು ಮಹಿಷಾ ದಸರಾ ಉದ್ಘಾಟನೆಗೆ ಕೆಲವು ದಲಿತರು ಕರೆದು ಕೊಂಡು ಬರುತ್ತಿರುವುದು ಸರಿನಾ?
50 ವರ್ಷದಿಂದ ಯಾವತ್ತೂ ಮಹಿಷಾ ದಸರಾ ಎಲ್ಲಿ ಮಾಡಿದ್ದಾರೆ? ಯಾರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ?ಮಹಿಷಾ ದಸರಾದಂತಾ ವಿಕೃತಿಗಳನ್ನು ಈಗಲೇ ಸದೆ ಬಡಿಯಬೇಕು ಎಂದರು.
ಈಗಲೇ ಇವರನ್ನು ಸದೆ ಬಡಿಯ ಬೇಕು.
ಇಲ್ಲದೆ ಇದ್ದರೆ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ವೀರಪ್ಪನ್ ನಮ್ಮ ದೇವರು. ನಮ್ಮ ಮೂಲ ಪುರಷ ಅಂತಾ ಹೇಳಿ ಮಲೈ ಮಹದೇಶ್ವರನನ್ನು ದೆವ್ವ ಮಾಡುತ್ತಾರೆ.
ವೀರಪ್ಪನ್ ನಮ್ಮ ಮೂಲ ನಿವಾಸಿ, ಅವನು ಪ್ರಕೃತಿ ರಕ್ಷಕ ಅಂತಾ ಕಥೆ ಕಟ್ಟಿ ಮಲೈ ಮಹದೇಶ್ವರನನ್ನು ದೆವ್ವ ಮಾಡಿ ಬಿಡುತ್ತಾರೆ ಎಂದು ಕಿಡಿಕಾರಿದರು