ಮೈಸೂರು : ಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನಲೆ
ಮೈಸೂರಿನಲ್ಲಿ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಿರುವ ವಿಚಾರಕ್ಕೆ ಅಕ್ಟೋಬರ್ 16ಕ್ಕೆ ನಮ್ಮ ನಡೆ ತಿಳಿಸುತ್ತೇವೆ ಎಂದು ಮೈಸೂರಿನಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದಿರ್ ಶಾಹಿದ್ ಹೇಳಿಕೆ ಕೊಟ್ಟಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ನಮಗೆ ಇಷ್ಟವಿಲ್ಲ.
ಈಗಾಗಲೇ ಇದನ್ನು ವಿರೋಧಿಸಿ ರಾಜೀನಾಮೆ ನೀಡಿದ್ದೇವೆ
ಮೊನ್ನೆ ಕುಮಾರಸ್ವಾಮಿ ಬಿಡದಿಯಲ್ಲಿ ಮೀಟಿಂಗ್ ಕರೆದಿದ್ರು, ಅಲ್ಲಿಗೆ ಪ್ರಮುಖ ನಾಯಕರು ಯಾರೂ ಹೋಗಿಲ್ಲ. ಕೇವಲ ಫಾರೂಕ್ ಮಾತ್ರ ಹೋಗಿದ್ದಾರೆ
ಕೋಮುವಾದಿ ಬಿಜೆಪಿ ಜೊತೆ ಸೇರಿ ಅಧಿಕಾರ ಮಾಡುವ ಆಸೆ ನಮಗಿಲ್ಲ ಕುಮಾರಸ್ವಾಮಿಯ ಅವ್ರ ಈ ನಿರ್ಧಾರಕ್ಕೆ ಸಿಎಂ ಇಬ್ರಾಹಿಂ ಅವರ ವಿರೋಧವಿದೆ. ಯಾವುದೇ ಕಾರಣಕ್ಕೂ ನಾವು ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸುವುದಿಲ್ಲ, ಇದೇ 16ನೇ ತಾರೀಖು ರಾಜ್ಯಾಧ್ಯಕ್ಷ ಇಬ್ರಾಹಿಂ ಸಭೆ ಕರೆದಿದ್ದಾರೆ ಆ ಸಭೆಯ ಬಳಿಕ ನಮ್ಮ ಮುಂದಿನ ನಡೆ ಬಗ್ಗೆ ಹೇಳುತ್ತೇವೆ ಎಂದು ಅಬ್ದುಲ್ ಖಾದರ್ ಶಾಹಿದ್ ತಿಳಿಸಿದ್ದಾರೆ