– ಬೈಕ್ ರ್ಯಾಲಿ ಮೂಲಕ ಕಬಿನಿ ಜಲಾಶಯ ಮುತ್ತಿಗೆ !?
ಮೈಸೂರು : ಇಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಮೈಸೂರು ಜಿಲ್ಲಾ ವತಿಯಿಂದ ಬೈಕ್ ರ್ಯಾಲಿ ಮೂಲಕ ಕಬಿನಿ ಜಲಾಶಯಕ್ಕೆ ಮುತ್ತಿಗೆ ಹಾಕಲಾಯಿತು

ಮೈಸೂರಿನ ಗನ್ ಹೌಸ್ ಬಳಿ ಸುಮಾರು ನೂರಕ್ಕೂ ಹೆಚ್ಚು ಬೈಕ್ ಗಳಲ್ಲಿ ಬಂದ ರೈತರು ತಮಿಳುನಾಡಿಗೆ ಕಬಿನಿ ಜಲಾಶಯದಿಂದ ನೀರು ಹರಿಸುತ್ತಿರುವುದನ್ನು ಖಂಡಿಸಿ ನೀರಾವರಿ ಮಂತ್ರಿ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಕ್ಕಡಿಯನ್ನು ಹಿಡಿದುಕೊಂಡು ಒಂದು ಕಡೆ ಸರ್ಕಾರಗಳು ಇನ್ನೊಂದು ಕಡೆ ರೈತರ ಹಸಿರು ಶಾಲು ಹಾಕಿ ಯಾವಾಗಲೂ ತಮಿಳುನಾಡು ರಾಜ್ಯದ ಪರವಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸಿ ಪ್ರತಿ ವರ್ಷವೂ ರಾಜ್ಯದ ರೈತರಿಗೆ ಹಾಗೂ ಜನರಿಗೆ ನ್ಯಾಯ ಕೊಡಿಸುವಲ್ಲಿ ಹಾಗೂ ನೀರು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ ಎಂದು ಅಣುಕು ಪ್ರದರ್ಶನ ಮಾಡಿದರು.
ಬೆಳಿಗ್ಗೆ 11:30ಕ್ಕೆ ಹೊರಟ ಬೈಕ್ ರ್ಯಾಲಿ ಅಗ್ರಹಾರ ಸಿದ್ದಪ್ಪ ಸ್ಕ್ವೇರ್ ನಂಜು ಮಳಿಗೆ ಸಿಲ್ಕ್ ಫ್ಯಾಕ್ಟರಿ ಪಾಳ್ಯ ಶಿವಪುರ ಮಾರ್ಗವಾಗಿ ಶ್ರೀರಾಂಪುರ ರಿಂಗ್ ರಸ್ತೆ ತಲುಪಿ ಅಲ್ಲಿಂದ ಹೆಚ್ ಡಿ ಕೋಟೆ ರಸ್ತೆಯ ಮೂಲಕ ಹೋಗುವ ದಾರಿ ಮಧ್ಯೆ ಜಯಪುರದ ಸರ್ಕಲ್ ನಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಈಗಾಗಲೇ ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ಮರಣ ಶಾಸನ ಬರೆದಿದ್ದು ರೈತರಿಗೆ ಸಂಕಷ್ಟ ತಂದಿದ್ದಾರೆ ಇನ್ನುಳಿದಿರುವ ನೀರನ್ನಾದರೂ ಜನ ಜಾನುವಾರುಗಳಿಗೆ ಕುಡಿಯಲು ನೀರನ್ನು ಉಳಿಸಿಕೊಳ್ಳಬೇಕು ಈಗಾಗಲೇ ಈ ಭಾಗದ ಹಳ್ಳಿಗಳಿಗೆ ಕಬಿನಿ ನೀರನ್ನು ಎರಡು ದಿನಕ್ಕೊಮ್ಮೆ ಬಿಡುತ್ತಿದ್ದಾರೆ ಆದ್ದರಿಂದ ಎಲ್ಲರೂ ಈ ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಅಲ್ಲಿಂದ ಕಬಿನಿ ಜಲಾಶಯಕ್ಕೆ ತಲುಪಿ 2002ರಲ್ಲಿ ಕಬಿನಿ ನೀರಿಗಾಗಿ ಹೋರಾಟ ಮಾಡುವ ವೇಳೆ ಹುತಾತ್ಮರಾದ ದಿವಂಗತ ರೈತ ಗುರುಸ್ವಾಮಿ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರನ್ನು ಪೊಲೀಸರು ತಡೆದಾಗ ಕಿರಗಸೂರು ಶಂಕರ್ ಮಾತನಾಡಿ ನಾವು ಬಂದಿರುವುದು ನಮ್ಮ ನೀರನ್ನು ಉಳಿಸಿಕೊಳ್ಳಲು ತಡೆಯಲು ನೀವು ಯಾರು? ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ನಾವು ಏಕೆ ಬರುತ್ತಿದ್ದೆವು? ನಾವೇ ನೀರನ್ನು ತಡೆದಿಟ್ಟುಕೊಳ್ಳುತ್ತೇವೆ ಬೇಕಾದರೆ ನೀವು ನಮ್ಮ ಜೊತೆಗೆ ಸಹಕಾರ ನೀಡಿ ಇದೇ ರೀತಿ 2002ರಲ್ಲಿ ಕಬಿನಿ ನೀರನ್ನು ತಮಿಳುನಾಡಿಗೆ ಬಿಡಬಾರದೆಂದು ಹೋರಾಟ ಮಾಡಿದಾಗ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ನಮ್ಮ ರೈತ ಗುರುಸ್ವಾಮಿ ರವರು ಬಲಿಯಾಗುತ್ತಿರಲಿಲ್ಲ ಆದ್ದರಿಂದ ಪದೇಪದೇ ಇದೇ ರೀತಿ ನಮ್ಮ ರಾಜ್ಯದ ರೈತರಿಗೆ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಸ್ಥಳದಲ್ಲಿದ್ದ ತಾಲೂಕು ದಂಡಾಧಿಕಾರಿ ಸಣ್ಣ ರಾಮಯ್ಯ ರಾಜ್ಯ ಸರ್ಕಾರ 144 ಸೆಕ್ಷನ್ ವಿಧಿಸಿರುವುದರಿಂದ ತಾವುಗಳು ದಯವಿಟ್ಟು ಸಹಕಾರ ನೀಡಬೇಕೆಂದು ಪ್ರತಿಭಟನಾಕಾರರಿಗೆ ಮನವಿ ಮಾಡಿಕೊಂಡರು
ಸ್ಥಳದಲ್ಲೇ ಇದ್ದ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ರವರನ್ನು ತರಾಟೆಗೆ ತೆಗೆದುಕೊಂಡಾಗ ಅವರು ಮಾತನಾಡಿ ನಾವು ಕೇವಲ 1500 ಕ್ಯೂಸೆಸ್ ನೀರನ್ನು ಹುಲ್ಲಳ್ಳಿ ರಾಂಪುರ ನಾಲೆಗಳ ಮೂಲಕ ಹರಿಸುತ್ತಿದ್ದೇವೆ ಎಂದು ತಿಳಿಸಿದಾಗ ರೈತರು ಅಕ್ರೋಶಗೊಂಡು ಒಂದು ಹನಿ ನೀರನ್ನು ಬಿಡುವುದು ಬೇಡ ಈಗಾಗಲೇ ರೈತರ ಬೆಳೆ ನಾಶವಾಗಿದೆ ನಿಮ್ಮ ನಾಟಕ ಬೇಡ ಎಂದು ಪೊಲೀಸರ ಸರ್ಪಗಾವಲನ್ನು ಭೇದಿಸಿ ನುಗ್ಗಲು ಯತ್ನಿಸಿದಾಗ ಸುಮಾರು ನೂರಕ್ಕೂ ಹೆಚ್ಚು ಜನ ರೈತರನ್ನು ಬಂಧಿಸಿ ಸಂಜೆ ವೇಳೆ ಬಿಡುಗಡೆಗೊಳಿಸಿದರು

ಬೈಕ್ ರ್ಯಾಲಿಯಲ್ಲಿ ಜಿಲ್ಲಾಧ್ಯಕ್ಷರಾದ ಪಿ ಸೋಮಶೇಖರ್,ಜಿಲ್ಲಾ ಉಪಾಧ್ಯಕ್ಷರಾದ ಪಟೇಲ್ ಶಿವಮೂರ್ತಿ, ಕೆರೆಹುಂಡಿ ರಾಜಣ್ಣ, ತಾಲೋಕು ಅಧ್ಯಕ್ಷರುಗಳಾದ ಬಿದರಹಳ್ಳಿ ಮಾದಪ್ಪ, ಹಂಪಾಪುರ ರಾಜೇಶ್, ಕುರುಬೂರು ಸಿದ್ದೇಶ್, ಕೆಂಡಗಣ್ಣ ಸ್ವಾಮಿ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಂಗಯ್ಯ, ಹನುಮಯ್ಯ, ಕಬ್ಬು ಬೆಳೆಗಾರರ ಸಂಘದ ಮುಖಂಡರುಗಳಾದ ಕೋಟೆ ಸುನಿಲ್ ಅಂಬಳೆ ಮಂಜುನಾಥ, ವರಕೋಡು ನಾಗೇಶ್, ಹಿರೇನಂದಿ ಮಾದೇವಪ್ಪ, ಚುಂಚುರಾಯನಹುಂಡಿ ಸಿದ್ದರಾಮ, ಗಿರೀಶ್, ನಂಜುಂಡಪ್ಪ, ಸೋಮಶೇಖರ್, ಮಾದೇವಸ್ವಾಮಿ, ಪ್ರಕಾಶ್, ಕಾಟೂರು ಮಾದೇವಸ್ವಾಮಿ, ಶ್ರೀಕಂಠ, ನಾಗೇಶ್, ಮಾರ್ಬಳ್ಳಿ ನೀಲಕಂಠಪ್ಪ, ಸಾತಗಳ್ಳಿ ಬಸವರಾಜ್,ಅಪ್ಪಣ್ಣ, ತರಕಾರಿ ಲಿಂಗರಾಜು, ಪರಶಿವಮೂರ್ತಿ, ಹೆಗ್ಗೋಟಾರ ಶಿವಸ್ವಾಮಿ, ಉಡಿಗಾಲ ಗುರುಪ್ರಸಾದ್, ರೇವಣ್ಣ, ಸುಂದರಪ್ಪ,ರಾಜು ಸುರೇಶ್ ನೆಲ್ಲಿ ಮಂಟೇಲಿಂಗು, ಕುಪ್ಯಾ ಪುಟ್ಟಸ್ವಾಮಿ, ಯಾಕನೂರ್ ರಾಜೇಶ್ ಮಲೇಶ್ ಶಂಬು ನಾಗೇಶ್ ಹೆಗ್ಗೂರು ರಂಗರಾಜು ನೀಲಸೋಗೆ ನಾಗರಾಜು, ಬಸವಲಿಂಗ, ಗುರು, ಶಿವಕುಮಾರ್, ಸತೀಶ್, ಹೇಮಂತ್, ಲಿಂಗಣ್ಣ , ಹೊಸಹೂಳಲು ಬೈರೇಗೌಡ, ಉಮೇಶ್, ಮಾದೇವ, ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು

