ಮೈಸೂರು : ಕಾವೇರಿಗಾಗಿ ರಾಜ್ಯ ಬಂದ್ ಹಿನ್ನಲೆ ಮೈಸೂರಿನಲ್ಲಿ ಅನೇಕ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದೆ. ಬಂದ್ ನಡುವೆಯೂ ಯುವರಾಜ್ ಕುಮಾರ್ ಅಭಿನಯದ ಯುವ ಚಿತ್ರ ಮೈಸೂರಿನ ಚಾಮುಂಡಿ ವಿಹಾರದಲ್ಲಿ ಚಿತ್ರೀಕರಣ ಮಾಡುತ್ತಿದೆ ಎಂದು ಕನ್ನಡ ಪರ ಸಂಘಟನೆಗಳು ಮುತ್ತಿಗೆ ಹಾಕಿದವು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಯುವರಾಜ್ ಕುಮಾರ್ , ಘಟನೆ ಬಗ್ಗೆ ನಟ ಯುವರಾಜ್ ಸ್ಪಷ್ಟನೆ ನೀಡಿದರು.ಇಂದು ಯಾವುದೇ ಚಿತ್ರಿಕರಣ ನಡೆಯುತ್ತಿರಲಿಲ್ಲ.ನಿನ್ನೆ ಚಿತ್ರೀಕರಣ ನಡೆದಿತ್ತು.
ಮತ್ತೆ ನಾಳೆಯಿಂದ ನಡೆಯುತ್ತೆ.ಸೆಟ್ ಲೈಟಿಂಗ್ ಸಮಸ್ಯೆಯಾಗಿತ್ತು.ಅದನ್ನು ಪರಿಶೀಲನೆ ಮಾಡಲು ಬಂದಿದ್ದೆ.ಆದರೆ ಸಂಘಟನೆಯವರು ನಾವು ಚಿತ್ರೀಕರಣ ಮಾಡುತ್ತಿದ್ದೇವೆ ಅಂತ ಹೇಳುತ್ತಿದ್ದಾರೆ.ನಮ್ಮ ಕುಟುಂಬ ಯಾವಾಗಲು ಕಾವೇರಿ ಹೋರಾಟದಲ್ಲಿ ಇದೆ.
ಚಿತ್ರರಂಗ ಕಾವೇರಿ ಹೋರಾಟದ ಪರವಾಗಿದ್ದೇವೆ ಎಂದು
ಯುವ ಚಿತ್ರದ ನಾಯಕ ನಟ ಯುವರಾಜ್ ಕುಮಾರ್ ಸ್ಪಷ್ಟನೆ ಕೊಟ್ಟರು