ಬೆಂಗಳೂರು : ಕನ್ನಡ ಪರ ಸಂಘಟನೆಗಳ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಬೆಂಬಲ ಸೂಚಿಸಿದ್ದು, ಈ ಹೋರಾಟದಲ್ಲಿ ಸ್ಯಾಂಡಲ್ ವುಡ್ ನ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ನಟ ಉಪೇಂದ್ರ ಮಾತನಾಡಿ, ‘ಈವರೆಗೂ ಪರಿಹಾರ ಸಿಗದೇ ಇರೋ ಏಕೈಕ ಸಮಸ್ಯೆ ಎಂದರೆ ಅದು ಕಾವೇರಿ ನದಿ ನೀರಿನ ಸಮಸ್ಯೆ’ ಎಂದರು.
ಮುಂದುವರೆದು ಮಾತನಾಡಿ ಉಪೇಂದ್ರ, ‘ನಾವೆಲ್ಲರೂ ಬುದ್ದಿವಂತರು. ವಿಚಾರ ಮಾಡುವ ಶಕ್ತಿಯಿದೆ. ಅದನ್ನು ಬಳಸಿಕೊಂಡು ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಬೇಕು. ನಮ್ಮ ಸಮಸ್ಯೆಗೆ ನಾವೇ ಪರಿಹಾರ ಹುಡುಕಿಕೊಳ್ಳಬೇಕು. ಎರಡೂ ಕಡೆಗಳಲ್ಲೂ ಈ ಕೆಲಸ ನಡೆಯಬೇಕು’ ಎಂದರು.
ಇಂದಿನ ರಾಜ್ಯ ಬಂದ್ ಗೆ ಕನ್ನಡ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಿದ್ದು ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಕುಳಿತು ಮಾತನಾಡುವ ನೈತಿಕತೆ ತೋರಬೇಕು ಎರಡು ರಾಜ್ಯದ ರೈತರ ಹಿತ ಕಾಯಬೇಕು ಎಂದು ಕಲಾವಿದರು ಅಭಿಪ್ರಾಯಪಟ್ಟರು