ನಂಜನಗೂಡು : ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ಕರ್ನಾಟಕ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಂಜನಗೂಡು ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ನಂಜನಗೂಡಿನ ರೈತ, ದಲಿತ , ಹಾಗೂ ಪ್ರಗತಿಪರ ಪರ ಸಂಘಟನೆಗಳು ನಂಜನಗೂಡು ಬಂದ್ ಗೆ ಕರೆ ನೀಡಿದ್ದವು
ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ರಸ್ತೆಯಲ್ಲಿ ಮಲಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಸಂಸದರು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸಂಘಟನೆಗಳಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ. ಎಂ.ಜಿ ರಸ್ತೆ, ಆರ್ ಪಿ ರಸ್ತೆ ಮೂಲಕ ಹುಲ್ಲಹಳ್ಳಿ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಕಾವೇರಿ ಪ್ರಾಧಿಕಾರದ ಆದೇಶ ಮತ್ತು ಸುಪ್ರೀಂ ಕೋರ್ಟಿನ ತೀರ್ಪು ಕರ್ನಾಟಕದ ರೈತರು ಮತ್ತು ಸಾರ್ವಜನಿಕರ ನೇಣು ಕುಣಿಕೆಯಾಗಿದೆ.
ಕೇವಲ ಒಂದೇ ಒಂದು ಬಾರಿ ವ್ಯವಸಾಯ ಮಾಡಿ ಜಲಾಶಯಗಳಲ್ಲಿ ಉಳಿದ ನೀರನ್ನು ಕುಡಿಯಲು ನಾವು ಉಪಯೋಗಿಸುತ್ತಿದ್ದೇವೆ. ಆದರೆ, ನಾವು ಕುಡಿಯುವ ನೀರನ್ನು ಕೂಡ ಕಿತ್ತುಕೊಳ್ಳುವ ದುಃಸಾಹಸದಲ್ಲಿ ತಮಿಳುನಾಡು ಸರ್ಕಾರ ಮುಂದಾಗಿದೆ.
ಯಾವುದೇ ಕಾರಣಕ್ಕೂ ಕರ್ನಾಟಕದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದು ಬೇಡ. ಈಗಾಗಲೇ ಸಾಕಷ್ಟು ನೀರನ್ನು ಸಿದ್ದರಾಮಯ್ಯ ಸರ್ಕಾರ ಹರಿಬಿಟ್ಟಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ಬಸ್ ತಡೆದು ರೈತರ ಮತ್ತು ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ಪ್ರತಿಭಟನೆಯಲ್ಲಿ ರೈತ, ದಲಿತ, ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.