ಮೈಸೂರು : ಕಾವೇರಿ ನದಿ ನೀರಿನ ಉಳಿವಿಗಾಗಿ ಮೈಸೂರಿನಲ್ಲಿ ಹೋರಾಟ ಮುಂದುವರೆದಿದ್ದು
ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಜೆಡಿಎಸ್ ನಾಯಕರು, ಕಾರ್ಯಕರ್ತರು ನಗರದ ಗಾಂಧೀ ವೃತ್ತದಲ್ಲಿ ಜೆಡಿಎಸ್ ನಿಂದ ಧರಣಿ ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕರಾದ ಕೆ ಮಹದೇವ್, ಅಶ್ವಿನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ನಗರಾಧ್ಯಕ್ಷ ಕೆ ಟಿ ಚಲುವೇಗೌಡ ಸೇರಿದಂತೆ ಜೆಡಿಎಸ್ ನ ಹಾಲಿ ಹಾಗು ಮಾಜಿ ನಗರಪಾಲಿಕೆ ಸದಸ್ಯರು, ಅಪಾರ ಸಂಖ್ಯೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿ.
ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ.
ತಲೆ ಮೇಲೆ ಖಾಲಿ ಕೊಡಗಳನ್ನು ಹೊತ್ತುಕೊಂಡು ಪ್ರತಿಭಟಿಸಿದ ಜೆಡಿಎಸ್ ನ ಮಹಿಳಾ ನಾಯಕಿಯರು.