ಮೈಸೂರು : ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಹಿನ್ನೆಲೆ.
ರಾಜ್ಯ ಜೆಡಿಎಸ್ ಕಾರ್ಯದರ್ಶಿ ಅಬ್ದುಲ್ ಖಾದರ್ ಶಾಹಿದ್ ಸುದ್ದಿ ಗೋಷ್ಠಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಎನ್ ಆರ್.ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಬ್ದುಲ್ ಖಾದರ್ ಶಾಹಿದ್.
ಜೆಡಿಎಸ್ ನಡೆಗೆ ಬೇಸರ ವ್ಯಕ್ತಪಡಿಸಿದ ಅಬ್ದುಲ್ ಖಾದರ್ ಶಾಹಿದ್.ಜಾತ್ಯಾತೀತ ಜನತಾದಳ ಎಂದು ಹೆಸರು ಇಟ್ಟುಕೊಂಡು ಈಗ ಕೋಮುವಾದಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ನಮಗೆ ಬೇಸರ ತಂದಿದೆ
ಹಾಗಾಗಿ ನಾವು ಜೆಡಿಎಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜಿನಾಮೆ ನೀಡುಲು ಮುಂದಾಗಿದ್ದೇವೆ.
ದಿನನಿತ್ಯ ಅಲ್ಪಸಂಖ್ಯಾತರ ಮೇಲೆ ವಿಷ ಕಾರುವ ಬಿಜೆಪಿಯೊಡನೆ ಮೈತ್ರಿ ನಮಗೆ ಬೇಸರ ತಂದಿದೆ.
ಹಾಗಾಗಿ ಪಕ್ಷದಲ್ಲಿ ನಾವು ಮುಂದುವರೆಯಲು ಇಷ್ಟವಿಲ್ಲ.
ಹಾಗಾಗಿ ನಾವೆಲ್ಲ ಸಾಮೂಹಿಕ ರಾಜಿನಾಮೆ ನೀಡುತ್ತಿದ್ದೇವೆ ಎಂದರು.
ಸೆ. 27 ಕ್ಕೆ ನಾವೆಲ್ಲ ಸಾಮೂಹಿಕವಾಗಿ ರಾಜಿನಾಮೆ ನೀಡಲಿದ್ದೇವೆ.ನನ್ನ ಬೆಂಬಲಿಗರೊಂದಿಗೆ ಸಾವಿರಾರು ಜನ ಪಕ್ಷ ತೊರೆಯುತ್ತಿದ್ದೇವೆ.ಮುಂದಿನ ದಿನಗಳಲ್ಲಿ ಯಾವ ಪಕ್ಷ ಸೇರಬೇಕು ಎಂದು ಕಾರ್ಯಕರ್ತರ ಜೊತೆಗೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ ಎಂದು ತಿಳಿಸಿದರು