ಮೈಸೂರು : ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಅವರು ಸಂಘವನ್ನು ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ, ಇದು ಕರ್ನಾಟಕ ರಾಜ್ಯದ 65 ಲಕ್ಷ ಕುರುಬರಿಗೆ ಮಾಡುತ್ತಿರುವ ವಂಚನೆ ಎಂದು ಬಿಜೆಪಿಯ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಜೋಗಿ ಮಂಜು ಕಿಡಿಕಾರಿದ್ದಾರೆ
ಸುಬ್ರಹ್ಮಣ್ಯ ರವರು ದಿನನಿತ್ಯ ತಮ್ಮ ಲೆಟರ್ ಹೆಡ್ ಬಳಸಿ ಬಿ.ಜೆ.ಪಿ.ಯವರಿಗೆ,ಆರ್,ಎಸ್,ಎಸ್,ನವರಿಗೆ, ಜಾತ್ಯತೀತ ಜನತಾದಳದ ನಾಯಕರಿಗೆ, ಹಾಗೂ ಭಾ.ಜ.ಪ. ಕೇಂದ್ರದ ನಾಯಕರುಗಳಿಗೆ ವಿನಾಕಾರಣ ಅವರ ವಿರುದ್ಧ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಾ ಸಂಘವನ್ನು ಅಪಕೀರ್ತಿಗೆ ಗುರಿಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಹಾಗೂ ನಾಯಕರಾದ ಸಿದ್ದ ರಾಮಯ್ಯ ಹಾಗೂ ಡಿ.ಕೆ.ಶಿವಕು್ಮಾರ್ ರವರ ಓಲೈಕೆಗಾಗಿ ಪ್ರದೇಶ ಕುರುಬರ ಸಂಘದ ಹೆಸರಿನಲ್ಲಿ ಹೇಳಿಕೆ ಕೊಡುವುದು ಸರಿಯಲ್ಲ, ಈ ರೀತಿ ಹೇಳಿಕೆಯನ್ನು ಕೊಡುವ ತೆವಲಿದ್ದರೆ ಪ್ರದೇಶ ಕುರುಬರ ಸಂಘಕ್ಕೆ ರಾಜೀನಾಮೆಯನ್ನು ನೀಡಿ ವೈಯಕ್ತಿಕ ಸಂಘಟನೆ ಮಾಡಿ ಹೇಳಿಕೆಯನ್ನು ಕೊಡಲಿ ಎಂದಿದ್ದಾರೆ…
ಕೆ.ಅರ್.ಕ್ಷೇತ್ರದ ಶಾಸಕರಾದ ಶ್ರೀ ವತ್ಸ ರವರ ಬಗ್ಗೆ ಮಾತನಾಡುವ ನೈತಿಕತೆ ಸುಬ್ಬಣ್ಣ ರವರಿಗೆ ಇಲ್ಲ..
ಅವರ ರಾಜಕೀಯ, ಅವರ ನಡವಳಿಕೆ, ಅವರ ಚಾರಿತ್ರೈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ..
ಶ್ರೀ ವತ್ಸ ರವರು ಪತ್ರಿಕಾಗೋಷ್ಠಿ ಮಾಡಿ ಯತೀದ್ರ ಸಿದ್ದರಾಮಯ್ಯ ನವರು ಕುಕ್ಕರ್,ಐರನ್ ಬಾಕ್ಸ್,ಸೀರೆ ಕೊಡಲು ತಂದೆಯವರು ಬರಬೇಕಾಗಿತ್ತು ಅಂತ ಸ್ವತಃ ಯತೀಂದ್ರ ರವರು ಹೇಳಿದ್ದಾರೆ ಅದರೆ ಇದು ಮತದಾರರಿಗೆ ಅಮೀಷ ತೋರಿ ಅವರಿಂದ ಮತ ಹಾಕಿಸಿಕೊಂಡದ್ದು ಸತ್ಯ ಅಲ್ಲವೇ.
ಅದರ ಬಗ್ಗೆ ಚುನಾವಣಾ ಅಯೋಗಕ್ಜೆ ದೂರು ಕೊಡುತ್ತೇನೆ ಅಂದರೆ ತಪ್ಪೇನು??
ಭಾರತೀಯ ಜನತಾ ಪಾರ್ಟಿ ಒಬ್ಬ ಸಾಮಾನ್ಯ ಕಾರ್ಯಕರ್ತ ನಿಗೆ ಟಿಕೇಟ್ ಕೊಟ್ಟು ಗೆಲ್ಲಿಸುವ ಮೂಲಕ ಕೃಷ್ಣರಾಜ ಕ್ಷೇತ್ರದಲ್ಲಿ ಕಮಲ ಅರಳಿಸಿದೆ,,
ಇವರನ್ನು ಗೆಲ್ಲಿಸಲು ಮತದಾನ ಮಾಡಿದ 73.670 ಜನ ಮತದಾರರಿಗೆ ಸುಬ್ಬಣ್ಣ ಅವಮಾನಮಾಡುತ್ತಿರುವುದು ಸರಿ ಅಲ್ಲ…
ಸತ್ಯ ವನ್ನು ಹೇಳಿದರೆ ನಿಮಗೆ ಎನು ಕಷ್ಟ,
ಮೈಸೂರು ಜಿಲ್ಲೆಯಲ್ಲಿ ನ್ಯಾಯಯುತವಾಗಿ ಕನಕದಾಸರ ಪ್ರತಿಮೆ, ಸಂಗೊಳ್ಳಿ ರಾಯಣ್ಣ, ಹಕ್ಕ ಬುಕ್ಕ ,ಅಹಲ್ಯ ಬಾಯಿ ಹೋಳ್ಕರ್ ರವರ ಪ್ರತಿಮೆ ನಿರ್ಮಾಣ ಹಾಗೂ ಅವರ ವಿಚಾರ ಧಾರೆ ಕಡೆ ಗಮನ ಕೊಡದೆ, ಜಿಲ್ಲೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸಾಮಾಜಿಕ,ಆರ್ಥಿಕ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುವುದನ್ನು ಬಿಟ್ಟು ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ರೀತಿ ಇಲ್ಲ ಸಲ್ಲದ ಹೇಳಿಕೆ ನೀಡುವ ಚಾಳಿ ಮುಂದುವರಿದರೆ ಬೆಂಗಳೂರಿನ ಕೇಂದ್ರ ಕಛೇರಿಯ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು