ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023.ಅಮವಾಸ್ಯೆ ಹಿನ್ನೆಲೆ.ಗಜಪಡೆ ತಾಲೀಮಿಗೆ ಇಂದು ಬ್ರೇಕ್ ಬಿದ್ದಿದೆ.
ರೆಸ್ಟ್ ಮೋಡ್‌ನಲ್ಲಿರುವ ಜಂಬೂ ಸವಾರಿ ಆನೆಗಳು.
ಗಜಪಡೆ ಸೇರಿಕೊಂಡ ಅರ್ಜುನ ಆನೆ.ಅರಮನೆ ಆವರಣಕ್ಕೆ ಆಗಮಿಸಿದ ಅರ್ಜುನ.ದಸರಾ ಗಜಪಡೆಯ ಮಾಜಿ ಕ್ಯಾಪ್ಟನ್ ಅರ್ಜುನ ಎಂಟ್ರಿ.ಮೊದಲ ಹಂತದ ದಸರಾ ಗಜಪಡೆಯೊಂದಿಗೆ ಆಗಮಿಸಿದ್ದ ಅರ್ಜುನ ಆನೆ.
ಆ ಬಳಿಕ ಹೆಚ್ ಡಿ ಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ತೆರಳಿದ್ದ ಅರ್ಜುನ.
ಇಂದು ಅರಮನೆ ಅವರಣಕ್ಕೆ ಎಂಟ್ರಿ ಕೊಟ್ಟ ಅರ್ಜುನ.
ಅರ್ಜುನ ಆನೆಗೆ ಪೂಜೆ ಸಲ್ಲಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು.
ಕಬ್ಬು ಬೆಲ್ಲ ತಿನ್ನಿಸಿ ಆನೆ ಬರಮಾಡಿಕೊಂಡ ಸಿಬ್ಬಂದಿ.
ಮಾವುತ ಕಾವಾಡಿಗಳಿಂದ ಆನೆಗೆ ಸ್ನಾನ ಮಾಡಿಸುವ ಕಾರ್ಯ.ನಾಳೆಯಿಂದ ನಿತ್ಯ ತಾಲೀಮಿನಲ್ಲಿ ಭಾಗಿಯಾಗಲಿರುವ ಅರ್ಜುನ.

