ಮಂಡ್ಯ : ಒಕ್ಕಲಿಗರ ಕೋಟೆ ಎಂದೇ ಬಿಂಬಿತವಾಗಿರುವ ಮಂಡ್ಯ ಗೆಲ್ಲುವ ಗುರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೊಂದಿದ್ದರು ಈಗ ಡಿಕೆಶಿ ಕನಸಿಗೆ ಬೆಂಕಿ ಬಿದ್ದಿದೆ. ಕುಮಾರಸ್ವಾಮಿ ಹೊಡೆತಕ್ಕೆ ಡಿಕೆಶಿ ಆಪರೇಷನ್ ಹಸ್ತ ಮಕಾಡೆ ಮಲಗಿದೆ.
ಜೆಡಿಎಸ್ ನಾಯಕ, ಮಾಜಿ ಶಾಸಕ ಸಿಎಸ್ ಪುಟ್ಟರಾಜ ಅವರನ್ನು ಆಪರೇಷನ್ ಹಸ್ತದಡಿ ಪಕ್ಷಕ್ಕೆ ಕರೆ ತರುವ ಪ್ರಯತ್ನ ನಡೆಸಿದ್ದರು ಎಂಬ ಮಾತುಗಳು ಕೇಳಿ ಬಂದಿದೆ.
ಈ ಸಂಬಂಧ ಸಿಎಸ್ ಪುಟ್ಟರಾಜು ಜೊತೆ ಮಾತುಕತೆ ಸಹ ನಡೆದಿತ್ತು ಎನ್ನಲಾಗಿತ್ತು. ಪುಟ್ಟರಾಜು ಅವರನ್ನು ಕಾಂಗ್ರೆಸ್ಗೆ ತಂದು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ಕುರಿತು ಚರ್ಚೆಗಳು ನಡೆದಿದ್ದವು.
ಈಗ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜೊತೆಯಾಗಿ ಹೋಗುವ ನಿರ್ಣಯವನ್ನು ತೆಗೆದುಕೊಂಡಿವೆ. ಇದರ ಬೆನ್ನಲ್ಲೇ ಸಿಎಸ್ ಪುಟ್ಟರಾಜು ಅವರನ್ನು ಸಂಪರ್ಕಿಸಿರುವ ದಳಪತಿಗಳು ವಿಶೇಷ ಆಫರ್ ನೀಡಿದೆ ಎನ್ನಲಾಗಿದೆ.ಮೈತ್ರಿ ಒಪ್ಪಂದದಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಪಡೆಯಲಿದೆ. ಪಕ್ಷ ಮಂಡ್ಯ ಕ್ಷೇತ್ರದ ಟಿಕೆಟ್ ನಿಮಗೆ ಕೊಡಲಿದೆ ಎಂಬ ಭರವಸೆಯನ್ನು ಜೆಡಿಎಸ್ ನೀಡಿದೆಯಂತೆ.ಜೆಡಿಎಸ್ ಭರವಸೆ ಬೆನ್ನಲ್ಲೇ ಸಿಎಸ್ ಪುಟ್ಟರಾಜು ಕಾಂಗ್ರೆಸ್ ಸೇರುವ ಯೋಚನೆಯನ್ನು ಬಿಟ್ಟಿದ್ದಾರೆ. ಹಾಗಾಗಿ ಮಂಡ್ಯದಲ್ಲಿ ಡಿಕೆ ಶಿವಕುಮಾರ್ ಅವರ ಆಪರೇಷನ್ ಹಸ್ತ ವಿಫಲವಾಗಿದೆಯಂತೆ.
ಪುಟ್ಟರಾಜು ಕೈ ಕೊಟ್ಟ ಹಿನ್ನೆಲೆ ಡಿಕೆ ಶಿವಕುಮಾರ್ ಆಪರೇಷನ್ ಪ್ಲಾನ್ ಬಿಗೆ ಮುಂದಾಗಿದ್ದಾರಂತೆ. ಜೆಡಿಎಸ್ ತೊರೆದು ಬಿಜೆಪಿ ಸೇರಿ ಮಂತ್ರಿಯಾಗಿದ್ದ ನಾರಾಯಣಗೌಡರನ್ನು ಕಾಂಗ್ರೆಸ್ ತರಲು ಡಿಕೆ ಶಿವಕುಮಾರ್ ಪ್ರಯತ್ನಿಸುತ್ತಿದ್ದಾರಂತೆ.ಆದರೆ ನಾರಾಯಣ ಗೌಡ ಡಿಕೆಶಿಗೆ ಬಲೆಗೆ ಬೀಳುತ್ತಾರಾ ಕಾದು ನೋಡಬೇಕಿದೆ