ಮೈಸೂರು : ಮಹಿಷ ದಸರಾ ಆಚರಣೆ ವಿಚಾರಕ್ಕೆ
ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೆಂಗ್ ಮಾಡ್ತಾರೋ ಮಾಡಲಿ ನೋಡ್ತೀನಿ.
ಯಾವ ಸರ್ಕಾರ ಬಂದರು ಆಚರಣೆ ಮಾಡುವಂತಿಲ್ಲ.
ಬಹುಸಂಖ್ಯಾತರ ಭಾವನೆಗೆ ದಕ್ಕೆಯಾಗುತ್ತದೆ.
ಏನೇ ಕಷ್ಟ ಬಂದರು ಲಕ್ಷಾಂತರ ಮಂದಿ ಚಾಮುಂಡಿ ತಾಯಿಯ ಬಳಿ ಹೋಗುತ್ತಾರೆ.ಅಂತಾದರಲ್ಲಿ ತಾಯಿಯನ್ನು ತುಚ್ಚವಾಗಿ ಮಾತನಾಡುವವರಿಗೆ ಹೇಗೆ ಅವಕಾಶ ನೀಡ್ತಾರೆ?ಬಿ ಎಸ್ ಯಡಿಯೂರಪ್ಪ ನವರು ಮುಖ್ಯಮಂತ್ರಿ ಆಗಿದ್ದಾಗ ಸೋಮಣ್ಣ ಹಾಗೂ ನಾವು ಸೇರಿ ಅನುಮತಿಗೆ ಅವಕಾಶ ಕೊಟ್ಟಿರಲಿಲ್ಲ.
ಮೈಸೂರಿಗರು ಈ ವಿಚಾರದಲ್ಲಿ ಒಟ್ಟಾಗಬೇಕು.
ನಿಮಗೆ ಏನೇ ಕಷ್ಟ ಬಂದರು ತಾಯಿ ಬಳಿ ಬೇಡಿಕೊಳ್ಳುತ್ತಿರಿ, ಅಂತಹ ತಾಯಿಗೆ ಅವಮಾನವಾಗುವಾಗ ನೀವೆಲ್ಲ ಒಟ್ಟಿಗೆ ಹೋರಾಡಬೇಕು ಎಂದರು.
ಈಗ ಮಹಿಷ ದಸರಾ ಮಾಡುವ ನಾಲ್ಕು ಜನರ ಮನೆಯಲ್ಲಿ ಹೋಗಿ ನೋಡಿ.ಅವರ ಹೆಂಡತಿಯರು ಚಾಮುಂಡಿ ತಾಯಿಯನ್ನ ಆರಾಧನೆ ಮಾಡುತ್ತಾರೆ.
ಇವರಿಗೆ ಕನಿಷ್ಠ ಅವರ ಮನೆಯವರ ಭಾವನೆಗಳನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಆದರೆ ಇಲ್ಲಿ ಬಂದು ಉದ್ದುದ್ದ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು