ಚಾಮರಾಜನಗರ : ಕಾವೇರಿ ವನ್ಯಜೀವಿ ಧಾಮದಲ್ಲಿ ಬಿಳಿ ಕಡೆವೆ ಪತ್ತೆಯಾಗಿದೆ. ಕ್ಯಾಮೆರಾ ಟ್ರಾಪ್‌ನಲ್ಲಿ ಬಿಳಿಬಣ್ಣದ ಕಡವೆಯ ಚಿತ್ರ ಸೆರೆಯಾಗಿದೆ. ವನ್ಯಜೀವಿ ತಜ್ಞ ಡಾ.ಸಂಜಯ್‌ಗುಬ್ಬಿ ತಂಡ ಚಿರತೆಗಳ ಅಧ್ಯಯನಕ್ಕೆ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆ.
ಈ ಹಿಂದೆ ಇದೇ ಪ್ರದೇಶದಲ್ಲಿ ಬಿಳಿ ಕೆನ್ನಾಯಿ ಪತ್ತೆಯಾಗಿತ್ತು. ಜೇನ್‌ಹೀರ್ಕ ಅಥವಾ ತರಕರಡಿಗಳು ಗೋಚರವಾಗಿದ್ದವು.ಇದೀಗ ಬಿಳಿಬಣ್ಣದ ಕಡವೆಯ ಚಿತ್ರ ಇದೇ ಮೊದಲ ಬಾರಿಗೆ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದ್ದು ಕಡೆವೆ ನೋಡಿದ ಪ್ರಾಣಿ ಪ್ರಿಯರು ಸಂತೋಷಗೊಂಡಿದ್ದಾರೆ