ಚಾಮರಾಜನಗರ : ತರಕಾರಿ ವಾಹನದಲ್ಲಿ ರಕ್ತ ಚಂದನ ಮರ ಸಾಗಾಣಿಕೆ ಯತ್ನಿಸಿದ ಐವರು ಆರೋಪಿಗಳನ್ನು ಬಂಧನ ಮಾಡಲಾಗಿದೆ.ಖಚಿತ ಮಾಹಿತಿ ಮೇರೆಗೆ ಆರ್.ಎಫ್.ಓ ನವೀನ್ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರತ್ಯೇಕ ಮೂರು ತಂಡಗಳೊಂದಿಗೆ ಕ್ಷಿಪ್ರ ಕಾರ್ಯಾಚರಣೆ ಮಾಡಿದಾಗ ಖದೀಮರು ಸಿಕ್ಕಿಬಿದ್ದಿದ್ದಾರೆ. ಹೂ ಕೋಸು ತುಂಬಿಕೊಂಡು ಕೆಳಗೆ ಎರಡು ರಕ್ತ ಚಂದನ ಮರಗಳ ಸಾಗಾಟ ಮಾಡುತ್ತಿದ್ದರು. ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಸಮೀಪ ವಾಹನ ತಡೆದು ತಪಾಸಣೆ ನಡೆಸಲಾಗಿದೆ. ಮಹೇಂದ್ರ ಬೊಲೆರೊ ಪಿಕಪ್ ನಲ್ಲಿ ಸಾಗಾಣಿಕೆ ಮಾಡುತ್ತಿದ್ದ ರಕ್ತ ಚಂದನ ಮರಗಳ ವಶ ಪಡಿಸಿಕೊಳ್ಳಲಾಗಿದೆ.
ಸುಮಾರು 50 ಕೆ.ಜಿ ತೂಕದ ಎರಡು ತುಂಡುಗಳನ್ನು ವಶವಾಗಿದೆ. ಸಾಗಟಕ್ಕೆ ಯತ್ನಿಸಿದ
ಬೆಂಗಳೂರಿನ ನಿವಾಸಿಯಾದ ರವಿ, ಗೋವಿಂದರಾಜ್, ಆನಂದ್, ಅಸ್ಗರ್ ಪಾಷ ಮತ್ತು ಮಹೇಂದ್ರ ಬಂಧಿತ ಆರೋಪಿಗಳು.ಗುಂಡ್ಲುಪೇಟೆಯ ಬಫರ್ ಜೋನ್ ವಲಯದಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಐವರನ್ನು ನ್ಯಾಯಾಂಗ ಬಂಧನಕ್ಕೆ ಅರಣ್ಯ ಇಲಾಖೆ ಒಪ್ಪಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಬಂಡಿಪುರ ಸಿಎಫ್ಓ ಡಾ.ರಮೇಶ್ ಕುಮಾರ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.