ಮೈಸೂರು : ಹುಲಿ ದಾಳಿಗೆ ಬಲಿಯಾಗಿದ್ದ ಬಾಲಕನ ಶವಯಾತ್ರೆಗೆ ಹೆಗಲು ಕೊಟ್ಟ ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಮೈಸೂರು ಜಿಲ್ಲೆಯ ಕಲ್ಲಟ್ಟಿ ಗ್ರಾಮದಲ್ಲಿ ಘಟನೆ ಹುಲಿಯೊಂದು 7 ವರ್ಷದ ಬಾಲಕನನ್ನು ತಿಂದು ಹಾಕಿತ್ತು. ಬಾಲಕನ ಶವ ಸಂಸ್ಕಾರ ವೇಳೆ ಶವಯಾತ್ರೆಗೆ ಹೆಗಲು ಕೊಟ್ಟ ಪೊಲೀಸ್ ಅಧಿಕಾರಿಯ ನಡೆಗೆ ಪ್ರಶಂಸೆ ಕೇಳಿ ಬಂದಿದೆ. ಚರಣ್ ಕುಟುಂಬಸ್ಥರ ಜೊತೆ ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾದ ಶಬ್ಬೀರ ಹುಸೇನ್.
ಶಬ್ಬೀರ್ ಹುಸೇನ್ ಗೆ ಇತರ ಪೊಲೀಸ್ ಸಿಬ್ಬಂದಿಗಳು ಸಹ ಕೈ ಜೋಡಿಸಿದ್ದಾರೆ