ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ 2023.
ಮೈಸೂರಿನ ಅರಣ್ಯ ಭವನದಲ್ಲಿ ಬೀಡು ಬಿಟ್ಟ ದಸರಾ ಗಜಪಡೆಗಳು.ನಿನ್ನೆ ಗಜಪಯಣದ ಮೂಲಕ ಕಾಡಿನಿಂದ ನಾಡಿಗೆ ಆಗಮಿಸಿದ ದಸರಾ ಗಜಪಡೆ ಇಂದು ವಿಶ್ರಾಂತಿ ತೆಗೆದುಕೊಳ್ಳುತ್ತಿವೆ
ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ನೆನ್ನೆ ಕಾಡಿನಿಂದ ನಾಡಿಗೆ ಆಗಮಿಸಿದ ಗಜಪಡೆಯಲ್ಲಿ
ಕಂಜನ್, ಮಹೇಂದ್ರ, ವಿಜಯ, ವರಲಕ್ಷ್ಮಿ, ಧನಂಜಯ, ಗೋಪಿ, ಭೀಮ, ಅರ್ಜುನ ಆನೆಗಳಿವೆ.
ಬೆಳಗ್ಗೆಯಿಂದಲೇ ಅಭಿಮನ್ಯು ಪಡೆಗೆ ಸ್ನಾನವನ್ನು ಮಾವುತರು, ಕಾವಾಡಿಗರು ಮಾಡಿಸುತ್ತಿದ್ದಾರೆ.
ಇಂದಿನಿಂದ ನಾಲ್ಕು ದಿನ ಅರಣ್ಯ ಭವನದಲ್ಲೇ ದಸರಾ ಗಜಪಡೆಗಳು ವಿಶ್ರಾಂತಿ ಪಡೆಯಲಿದ್ದು,
ಸೆ 5 ರಂದು ಅರಣ್ಯ ಭವನದಿಂದ ಮೈಸೂರು ಅರಮನೆಗೆ ಎಂಟ್ರಿ ಕೊಡಲಿವೆ. ದಸರಾ ಮುಗಿಯುವರೆಗೂ ಅರಮನೆಯಲ್ಲೇ ಆನೆಗಳು ವಾಸ್ತವ್ಯ ಹೂಡಲಿವೆ.